ಪಾಟ್ನಾ: ಬಿಹಾರ ವಿಧಾನಸಭಾ ನಾಲ್ಕನೇ ಹಂತದ ಚುನಾವಣೆ ಮತದಾನ ಆರಂಭವಾಗಿದ್ದು, ಈ ವರೆಗೂ ಶೇ.48.37ರಷ್ಟು ಮತದಾನವಾಗಿದೆ ಎಂದು ಭಾನುವಾರ ತಿಳಿದುಬಂದಿದೆ.
ನಾಲ್ಕನೇ ಹಂತದ ಈ ಚುನಾವಣೆಯು ಇಂದು ಬೆಳಿಗ್ಗೆ 7 ರಿಂದ ಆರಂವಾಗಿದ್ದು ಸಂಜೆ 5 ಗಂಟೆಗೆ ಮುಕ್ತಾವಾಗಲಿದೆ., ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಈಗಾಗಲೇ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇಂದು ನಡೆಯುತ್ತಿರುವ ಮತದಾನ ಪ್ರಕ್ರಿಯೆಯು 55 ಕ್ಷೇತ್ರಗಳಲ್ಲಿ ನಡೆಯುತ್ತಿದ್ದು ಚುನಾವಣೆಗಾಗಿ 14, 139 ಮತಗಟ್ಟೆ ಸ್ಥಾಪಿಸಲಾಗಿದೆ. ಸುಮಾರು 1. 46 93, 294 ಕೋಟಿ ಮತದಾರರು ಭಾಗವಹಿಸಲಿದ್ದಾರೆ. ಚುನಾವಣೆಯಲ್ಲಿ 57 ಮಹಿಳಾ ಅಭ್ಯರ್ಥಿಗಳು ಸೇರಿದಂದೆ ಒಟ್ಟು 776 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಕಳೆದ 2010ರಲ್ಲಿ 55 ಸೀಟುಗಳ ಪೈಕಿ ಬಿಜೆಪಿ ಪಕ್ಷವು 26 ಸ್ಥಾನಗಳನ್ನು ಗೆದ್ದಿತ್ತು. ಜೆಡಿಯು 24 ಸ್ಥಾನಗಳಲ್ಲಿ ಜಯಶಾಲಿಯಾಗಿತ್ತು. ಇದರಂತೆ ಆರ್‌ಜೆಡಿ 2 ಸೀಟು ಮತ್ತು ಪಕ್ಷೇತರರು ಒಂದು ಸೀಟು ಗೆದ್ದಿದ್ದರು. ಆದರೆ, ಈ ಬಾರಿ ಮಹಾಮೈತ್ರಿಕೂಟದಿಂದ ಆರ್‌ಜೆಡಿ 26 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಜೆಡಿಯು 21 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದೆ. ಈ ಹಿಂದೆ ನಡೆದ ಮೂರು ಸುತ್ತಿನ ಮತದಾನಗಳಲ್ಲಿ 131 ಸ್ಥಾನಗಳಿಗೆ ಈಗಾಗಲೇ ಮತದಾನ ನಡೆದಿದೆ. ಇದೀಗ ನಾಲ್ಕನೇ ಹಂತದ ಮತದಾನ ಮುಗಿದರೆ 186 ಸ್ಥಾನಗಳಿಗೆ ಮತದಾನವಾದಂತಾಗುತ್ತದೆ. ಇನ್ನುಳಿದ 5ನೇ ಹಂತದ ಚುನಾವಣೆಯು ಇದೇ ನವೆಂಬರ್ 5 ರಂದು ನಡೆಯಲಿದ್ದು, 5ನೇ ಹಂತದ ಮತದಾನವು 57 ಕ್ಷೇತ್ರಗಳಳ್ಲಿ ನಡೆಯಲಿವೆ. ನ.8ರಂದು ಮತಎಣಿಕೆ ನಡೆಯಲಿದ್ದು, ಪಕ್ಷಗಳ ಹಣೆಬರಹ ನಿರ್ಧಾರವಾಗಲಿದೆ.
ಮತದಾನ ಪ್ರಕ್ರಿಯೆಗೆ ಯಾವುದೇ ತೊಡಕಾಗದಂತೆ ಎಚ್ಚರಿಕೆ ವಹಿಸಿರುವ ಚುನಾವಣಾ ಆಯೋಗವು ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಿದೆ.