ಮಧ್ಯಪ್ರದೇಶ: ವೈವಾಹಿಕ ಜೀವನದಲ್ಲಿ ತೀವ್ರ ಅಸಮಾಧಾನ ಹೊಂದಿದ್ದ ಪತ್ನಿಯೊಬ್ಬಳು ತನ್ನ ಪತಿ ಮರ್ಮಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆಯೊಂದು ಮಧ್ಯಪ್ರದೇಶದ ಸಿರ್ಸೋಡಾ ಗ್ರಾಮದಲ್ಲಿ ನಡೆದಿದೆ.
ರಾಮ್ ದಯಾಲ್ ಅಹಿರ್ವಾರ್ (25) ಎಂಬ ವ್ಯಕ್ತಿಯೇ ದಾಳಿಗೊಳಗಾದ ವ್ಯಕ್ತಿಯಾಗಿದ್ದು, ಗ್ರಾಮ ನೀರವ ರಾತ್ರಿಯಲ್ಲಿ ಮಲಗಿರುವ ವೇಳೆ ಪತ್ನಿ ತನ್ನ ಪತಿಯ ಮರ್ಮಾಂಗಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಈ ವೇಳೆ ಬೆಂಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮತ್ತೆ ಆತನ ಮುಖದ ಮೇಲೂ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ್ದಾಳೆಂದು ತಿಳಿದುಬಂದಿದೆ.
ಪ್ರಸ್ತುತ ರಾಮ್ ದಯಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಮಹಿಳೆಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.