ಪಾಕ್ ಬುಡಕಟು ನ್ಯಾಯಾಲಯ ವಿಧಿಸಿದ ದಂಡ ಪಾವತಿಸಲು ಮಕ್ಕಳನ್ನೇ ಮಾರಾಟಕ್ಕಿಟ್ಟ!
ಪಾಕಿಸ್ತಾನದ ಬುಡಕಟ್ಟು ನ್ಯಾಯಾಲಯ ವಿಧಿಸಿರುವ ದಂಡ ಪಾವತಿ ಮಾಡಲು ವ್ಯಕ್ತಿಯೊಬ್ಬ ತನ್ನ ನಾಲ್ಕು ಮಕ್ಕಳನ್ನು 1 .6 ಮಿಲಿಯನ್ ಬೆಲೆಗೆ ಮಾರಾಟಕ್ಕಿಟ್ಟಿದ್ದಾನೆ.
ಇಸ್ಲಾಮಾಬಾದ್: ಪಾಕಿಸ್ತಾನದ ಬುಡಕಟ್ಟು ನ್ಯಾಯಾಲಯ ವಿಧಿಸಿರುವ ದಂಡ ಪಾವತಿ ಮಾಡಲು ವ್ಯಕ್ತಿಯೊಬ್ಬ ತನ್ನ ನಾಲ್ಕು ಮಕ್ಕಳನ್ನು 1 .6 ಮಿಲಿಯನ್ ಬೆಲೆಗೆ ಮಾರಾಟಕ್ಕಿಟ್ಟಿದ್ದಾನೆ.
ಗುಲಾಮ್ ರಸೂಲ್ ಖತೋಹರ್ ಎಂಬಾತ, ಮೂರು ಹಾಗೂ 8 ವರ್ಷದ ನಡುವಿನ ತನ್ನ ನಾಲ್ಕು ಜನ ಮಕ್ಕಳನ್ನು ಪಾಕ್ ನಲ್ಲಿರುವ ಜಾಕೋಬಾಬಾದ್ ನಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಮಾರಾಟಕ್ಕಿಟ್ಟಿದ್ದಾನೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಖತೋಹರ್ ಮಗ ಖೋಸೊ ಬುಡಕಟ್ಟಿಗೆ ಸೇರಿದ ಮಹಿಳೆಯೊಂದಿಗೆ 2 ವರ್ಷದ ಹಿಂದೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಎದುರಿಸುತ್ತಿದ್ದಾನೆ. ಖೋಸೊ ಬುಡಕಟ್ಟು ಕುಟುಂಬ ಈ ವಿಷಯವನ್ನು ಬುಡಕಟ್ಟು ನ್ಯಾಯಾಲಯಕ್ಕೆ ಕೊಂಡೊಯ್ದಿದ್ದಾರೆ. ಅಪರಾಧ ಸಾಬೀತಾಗಿರುವುದರಿಂದ ಖತೋಹರ್ ಕುಟುಂಬ ಖೋಸೊ ಬುಡಕಟ್ಟು ಕುಟುಂಬಕ್ಕೆ 1 .6 ಮಿಲಿಯನ್ ದಂಡ ಪಾವತಿಸಬೇಕು ಎಂದು ಆದೇಶ ನೀಡಿದೆ.
1 .6 ಮಿಲಿಯನ್ ಹಣ ಖತೋಹರ್ ಬಳಿ ಇಲ್ಲವಾದ ಕಾರಣ ದಂಡ ಪಾವತಿಸಲು ತನ್ನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಮೊಮ್ಮಕ್ಕಳನ್ನು ಮಾರಾಟಕ್ಕಿಟ್ಟಿದ್ದಾನೆ ಎಂದು ಡಾನ್ ವರದಿ ಮಾಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.