ಸಾಂದರ್ಭಿಕ ಚಿತ್ರ 
ದೇಶ

ತೂಕದ ಸಖಿಯರಿಗೆ ಇಲ್ಲ ಗಗನಕ್ಕೆ ಹಾರುವ ಸದವಕಾಶ!

ಗಗನಸಖಿಗಳೆಲ್ಲ ದುಃಖಿಗಳಾಗಿದ್ದಾರೆ, ಊಟ ತಿಂಡಿ ಬಿಟ್ಟು ಡಯೆಟ್ ಆರಂಭಿಸಿದ್ದಾರೆ. ತೂಕ ಇಳಿಸಿಕೊಳ್ಳಲು ಎಲ್ಲ...

ನವದೆಹಲಿ: ಗಗನಸಖಿಗಳೆಲ್ಲ ದುಃಖಿಗಳಾಗಿದ್ದಾರೆ, ಊಟ ತಿಂಡಿ ಬಿಟ್ಟು ಡಯೆಟ್ ಆರಂಭಿಸಿದ್ದಾರೆ. ತೂಕ ಇಳಿಸಿಕೊಳ್ಳಲು ಎಲ್ಲ ರೀತಿ ಸರ್ಕಸ್ ನಡೆಸುತ್ತಿದ್ದಾರೆ. ಇವರದ್ದು ಒಂದು ರೀತಿಯಲ್ಲಿ ಮಾಡು ಇಲ್ಲವೇ ಮಡಿ ಕದನ!

ಇಷ್ಟೆಲ್ಲಾ ಕಸರತ್ತು ಮಾಡಬೇಕಾದ ಅವಶ್ಯಕತೆಯೇನು ಎಂದು ಕೇಳುತ್ತಿದ್ದೀರಾ? ಇವರು ತೂಕ ಇಳಿಸಿಕೊಳ್ಳದೇ ಹೋದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ.  ಹೌದು. ಏರ್‍ಇಂಡಿಯಾ ಸಂಸ್ಥೆಯು ಸ್ಥೂಲಕಾಯದ ಸಿಬ್ಬಂದಿಗೆ ಗೇಟ್‍ಪಾಸ್ ನೀಡಲು ರೆಡಿಯಾಗಿದೆ. ಗಗನಯಾತ್ರಿಗಳು ಸೇರಿದಂತೆ 125 ಮಂದಿಯನ್ನು ಕೆಲಸದಿಂದ ಕಿತ್ತುಹಾಕಲು ನಿರ್ಧರಿಸಿದೆ.

ಇದಕ್ಕೆ ಕಾರಣ, ಬೊಜ್ಜು/ಸ್ಥೂಲಕಾಯ. ತೆಳ್ಳಗೆ, ಬಳುಕುವ ಬಳ್ಳಿಯಂತೆ ಇರಬೇಕಾದ ಗಗನಸಖಿಯರು ತೂಕ ಹೆಚ್ಚಿಸಿಕೊಂಡು ಧಡೂತಿಗಳಾಗಿ ರುವುದು ಏರ್‍ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಕಳೆದ ವರ್ಷವೇ 600 ಸಿಬ್ಬಂದಿಗೆ ನಿಗದಿತ ಸಮಯದೊಳಗೆ ತೂಕ ಇಳಿಸಿಕೊಂಡು `ಶೇಪ್ ಅಪ್' ಆಗಬೇಕೆಂದು ಸ್ಪಷ್ಟ ಆದೇಶ ಹೊರಡಿಸಿತ್ತು.

ಅದರಂತೆ, ಯಾರು ಈಗ ತೆಳ್ಳಗಾಗಿದ್ದಾರೋ ಅವರನ್ನು ಉಳಿಸಿಕೊಂಡು, ಉಳಿದವರಲ್ಲಿ ಕೆಲವರಿಗೆ ಗ್ರೌಂಡ್ ಡ್ಯೂಟಿ ಕೊಟ್ಟು, ಮತ್ತೆ ಕೆಲವರಿಗೆ ಸ್ವಯಂ ನಿವೃತ್ತಿ ನೀಡಲು ಏರ್ ಇಂಡಿಯಾ ನಿರ್ಧರಿಸಿದೆ. ಪ್ರತಿ 3 ತಿಂಗಳಿಗೊಮ್ಮೆ ವೈದ್ಯರು ಸಿಬ್ಬಂದಿಯ ಪರೀಕ್ಷೆ ನಡೆಸಿ, `ಫಿಟ್', `ಟೆಂಪರರಿ ಫಿಟ್' ಮತ್ತು `ಪರ್ಮನೆಂಟ್ ಅನ್‍ಫಿಟ್' ಎಂಬ ಸರ್ಟಿಫಿಕೇಟ್ ನೀಡುತ್ತಾರೆ.

ಜತೆಗೆ, ಅತಿಕಾ ಯ ಹೊಂದಿರುವವರಿಗೆ ಮತ್ತೆ ಪೂರ್ವದ ಸ್ಥಿತಿಗೆ ಬರಲು 3 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಅದೂ ಫೇಲ್ ಆಯಿತೆಂದರೆ, ಕೆಲಸಬಿಟ್ಟು ಮನೆಗೆ ಹೋಗುವುದೊಂದೇ ದಾರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT