ಮುಸ್ಲಿಂ ಯುವಕನಿಂದ ಹಿಂದೂ ಸ್ನೇಹಿತನ ಅಂತ್ಯ ಸಂಸ್ಕಾರ
ಹಿಂದೂ- ಮುಸ್ಲಿಂ ಬಾಂಧವ್ಯಕ್ಕೆ ಕನ್ನಡಿ ಹಿಡಿಯುವಂತಹ ಘಟನೆಯೊಂದು ಮಧ್ಯಪ್ರದೇಶದ ಬೈತಾಲ್ ಜಿಲ್ಲೆಯಲ್ಲಿ ನಡೆದಿದೆ....
ಭೂಪಾಲ್: ಹಿಂದೂ- ಮುಸ್ಲಿಂ ಬಾಂಧವ್ಯಕ್ಕೆ ಕನ್ನಡಿ ಹಿಡಿಯುವಂತಹ ಘಟನೆಯೊಂದು ಮಧ್ಯಪ್ರದೇಶದ ಬೈತಾಲ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಹಿಂದೂ ಸ್ನೇಹಿತ ಮೃತಪಟ್ಟಾಗ ಮುಸ್ಲಿಂ ವ್ಯಕ್ತಿಯೊಬ್ಬರು ತಾವೇ ಮುಂದೆ ನಿಂತು ಹಿಂದೂ ಧರ್ಮದ ಧಾರ್ಮಿಕ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಆಟೋ ಚಾಲಕ. ಅಬ್ದುಲ್ ರಜಾಕ್. ಆತನಿಗೆ ಸಂತೋಷ್ ಸಿಂಗ್ ಥಾಹಿರ್ ಎಂಬ ಸ್ನೇಹಿತನಿದ್ದ. ಸಂತೋಷ್ ಪತ್ನಿ ಛಾಯಾಬಾಯಿಯೊಂದಿಗೆ ವಾಸವಿದ್ದರು. ಅವರಿಗೆ ಮಕ್ಕಳು, ಸಂಬಂಧಿಕರು ಇರಲಿಲ್ಲ ಎನ್ನಲಾಗಿದೆ. ಹೀಗೆ ಇರುವಾಗ ಸಂತೋಷ್ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆಗ ರಜಾಕ್ ತಾವೇ ಮುಂದೆ ನಿಂತು ಸ್ನೇಹಿತನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ನಾನು ಜಾತಿ, ಧರ್ಮ ನೋಡಿ ಸಂತೋಷ್ ನನ್ನು ಸ್ನೇಹಿತನಾಗಿ ಮಾಡಿಕೊಳ್ಳಲಿಲ್ಲ. ನಮ್ಮ ನಡುವೆ ಆತ್ಮೀಯ ಬಾಂಧವ್ಯ ಇತ್ತು. ಆತ ನಿಧನ ಹೊಂದಿದಾಗ ನಾನೇ ಮುಂದೆ ನಿಂತು ಅಂತ್ಯ ಸಂಸ್ಕಾರ ಮಾಡಿದೆ ಎಂದು ರಜಾಕ್ ಹೇಳಿದ್ದಾನೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.