ನವದೆಹಲಿ: ವಿಪ್ರೋ, ಐಸಿಐಸಿಐ ಬ್ಯಾಂಕ್ ಸೇರಿದಂತೆ ಸೆನ್ಸೆಕ್ಸ್ ಗುಂಪಿನಲ್ಲಿರುವ 30 ಕಂಪನಿಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಕಂಪನಿಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳಪ್ರಕರಣಗಳು ನಡೆದಿರುವುದನ್ನು ಸ್ವತಃ ಕಂಪನಿಗಳೇ ಒಪ್ಪಿಕೊಂಡಿವೆ. ಮುಂಬೈ ಷೇರು ಮಾರುಕಟ್ಟೆಗೆ ಸಲ್ಲಿಸಿರುವ ವಾರ್ಷಿಕ ವರದಿಯಲ್ಲಿ ಕಂಪನಿಗಳು ಈ ಕುರಿತು ಹೇಳಿದ್ದು ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿ ದೆ ಎಂದು ಕೆಲವು ಕಂಪನಿಗಳು ಹೇಳಿದ್ದು ಇನ್ನು ಕೆಲವು ಇನ್ನೂ ಇತ್ಯರ್ಥವಾಗಿಲ್ಲ ಎಂದು ತಿಳಿಸಿವೆ.
ಇದೇ ಮೊದಲ ಬಾರಿಗೆ ಕಂಪನಿಗಳು ತಮ್ಮ ವಾರ್ಷಿಕ ವರದಿಗಳಲ್ಲಿ ಈ ಕುರಿತು ವಿವರಗಳನ್ನು ಬಹಿರಂಗಪಡಿಸಿವೆ. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾಯ್ದೆ ಜಾರಿಗೊಳಿಸಿದ ನಂತರ ಕಂಪನಿಗಳು ಈ ವಿವರಗಳನ್ನು ನೀಡಿವೆ.
ಸೆನ್ಸೆಕ್ಸ್ ಗುಂಪಿನಲ್ಲಿರುವ 30 ಕಂಪನಿಗಳ ಪೈಕಿ 18 ಕಂಪನಿಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿರುವ 370 ದೂರುಗಳು ಬಂದಿವೆ. ಇತರ ಹತ್ತು ಕಂಪನಿಗಳಲ್ಲಿ ಇಂತಹ ಘಟನೆಗಳು ನಡೆದಿರುವ ಕುರಿತು ದೂರುಗಳು ಬಂದಿಲ್ಲ. ಇನ್ನೆರಡು ಕಂಪನಿಗಳಾದ ಟಿಸಿಎಸ್ ಮತ್ತು ಸನ್ ಫಾರ್ಮ ಕಂಪನಿಗಳ ಕುರಿತು ವರದಿಗಳು ಸಿಕ್ಕಿಲ್ಲ. ಭಾರತಿ ಏರ್‍ಟೆಲ್, ಟಾಟಾ ಮೋಟಾರ್ಸ್, ಬಿಎಚ್‍ಇಎಲ್, ಡಾ.ರೆಡ್ಡೀಸ್ ಲ್ಯಾಬೊರೇಟರೀಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಐಟಿಸಿ, ಎನ್‍ಟಿಪಿಸಿ, ಎಂಅಂಡ್‍ಎಂ, ವೇದಾಂತ ಮತ್ತು
ಹಿಂದೂಸ್ತಾನ್ ಯೂನಿಲಿವರ್ ಕಂಪನಿಗಳಲ್ಲೂ ಲೈಂಗಿಕ ಪ್ರಕರಗಳು ನಡೆದಿವೆ.