ಎಂ.ಕೆ. ಸ್ಟಾಲಿನ್ 
ದೇಶ

ಜಯಲಲಿತಾ ಸರ್ಕಾರ ಮಹಿಳಾ ವಿರೋಧಿ: ಸ್ಟಾಲಿನ್

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಸರಕಾರ ಮಹಿಳಾ ವಿರೋಧಿಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹಲವು ಪಟ್ಟು ...

ಮಧುರೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಸರಕಾರ ಮಹಿಳಾ ವಿರೋಧಿಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹಲವು ಪಟ್ಟು ಹೆಚ್ಚಳವಾಗಿವೆ ಎಂದು ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ.
 
ಜಯಲಲಿತಾ ಅಧಿಕಾರವಧಿಯಲ್ಲಿ 380 ಮಹಿಳೆಯರು ವರದಕ್ಷಿಣೆ ದಾಹಕ್ಕೆ ಬಲಿಯಾಗಿದ್ದಾರೆ. ಡಿಎಂಕೆ ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಸೇಡಿನಿಂದಾಗಿ ಕೈ ಬಿಡಲಾಗಿದೆ ಎಂದು ದೂರಿದರು. ಡಿಎಂಕೆ ಪಕ್ಷ ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ಮದ್ಯದ ಅಂಗಡಿಗಳಿಗೆ ಬೀಗ ಜಡಿಯುವುದು ಖಚಿತ. ಡಿಎಂಕೆ ಸರಕಾರ ಅಧಿಕಾರಕ್ಕೆ ಬಂದ ಕ್ಷಣವೇ ಮದ್ಯ ಮಾರಾಟಕ್ಕೆ ನಿಷೇಧ ಹೇರುವ ಫೈಲ್‌ಗೆ ಸಹಿ ಹಾಕಲಾಗುವುದು ಎಂದು ಭರವಸೆ ನೀಡಿದರು.
 
 ಮದ್ಯ ಮಾರಾಟದಿಂದ ಹಲವಾರು ಕುಟುಂಬಗಳು ಸರ್ವನಾಶವಾಗುತ್ತಿವೆ. ಆದ್ದರಿಂದ, ರಾಜ್ಯವನ್ನು ಮದ್ಯ ಮುಕ್ತ ರಾಜ್ಯವಾಗಿಸಲಾಗುವುದು ಎಂದು ಹೇಳಿದ್ದಾರೆ. ರಾಜ್ಯ ಸರಕಾರ ರೈತರಿಗೆ ಪ್ರತಿ ಲೀಟರ್‌ಗೆ ಕೇವಲ 22 ರೂಪಾಯಿಗಳನ್ನು ಪಾವತಿಸುತ್ತಿದೆ. ಆದರೆ, 40 ರೂಪಾಯಿಗಳಿಗೆ ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದೆ ಎಂದು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಆಪಾದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾತೆ ಹಂಚಿಕೆ ಕಿತ್ತಾಟ: ಆರಂಭದಲ್ಲೇ ಅಸಮಾಧಾನದ ಅಲೆ: ಡಿಕೆಶಿ ಸರ್ಕಾರಕ್ಕಿದು ಆರಂಭಿಕ ಆಘಾತವೋ, ದೊಡ್ಡ ಸಂಕಷ್ಟದ ಮುನ್ಸೂಚನೆಯೋ?

ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ: ಗೃಹಬಳಕೆ ಸಿಲಿಂಡರ್‌ ದರ ಮತ್ತೆ ಏರಿಕೆ, ಬರೋಬ್ಬರಿ 29 ರೂ. ಹೆಚ್ಚಳ..!

ಶ್ರೇಯಸ್ ಅಯ್ಯರ್‌ಗೆ ಟಿ20 ನಾಯಕತ್ವ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ Suryakumar Yadav ನಿವೃತ್ತಿ? ಎಕ್ಸ್ ಪೋಸ್ಟ್ ವೈರಲ್!

'ಮಲ್ಲಘಟ್ಟ ಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ನನಗೆ ಮನ:ಶಾಂತಿ ಸಿಗುತ್ತದೆ:ಡಿ ಕೆ ಶಿವಕುಮಾರ್ ರೋಡ್‌ಶೋ; ಬೆಂಬಲಿಗರ ಸಂಭ್ರಮ-Video

ಬರನಾಡಿನ ಭಗೀರಥ: 200 ಕೆರೆ-3,000 ಕೊಳವೆ ಬಾವಿಗಳಿಗೆ ಮರುಜೀವ; ಗದಗದ ‘ಜಲಯೋಧ’ನ ಪ್ರೇರಣಾದಾಯಕ ಯಶೋಗಾಥೆ..!

SCROLL FOR NEXT