ನವದೆಹಲಿ: ಪಾಕಿಸ್ತಾನ ಮತ್ತು ಬಾಂಗ್ಲಾದಲ್ಲಿರುವ ಮುಸ್ಲಿಮರು ಮೂಲತಃ ಹಿಂದೂಗಳು ಎಂದು ಹೇಳುವ ಮೂಲಕ ಪಾಕಿಸ್ತಾನ ಹಿರಿಯ ಲೇಖಕಿ ಫೌಝಿಯಾ ಸೈಯ್ಯದ್ ಕಣಜದ ಗೂಡಿಗೆ ಕೈ ಹಾಕಿದ್ದಾರೆ.
ಖಾಸಗಿ ಚಾನೆಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಹಿಳಾ ಲೇಖಕಿ ಫೌಝಿಯಾ ಈಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ನೆಲೆಸಿರುವ ಮುಸ್ಲಿಮರ ಪೂರ್ವಿಕರು ಹಿಂದೂ ಧರ್ಮದ ಅನುಯಾಯಿಗಳಾಗಿದ್ದರು. ಅವರಲ್ಲಿ ಕೆಲವರು ಬೌದ್ಧರು ಕೂಡ ಆಗಿದ್ದಾರೆ ಎಂದು ಹೇಳಿದ್ದಾರೆ.
ಶೇ.99 ರಷ್ಟು ಪಾಕಿಸ್ತಾನ ಮುಸ್ಲಿಮರು ಹಿಂದೂದಗಳಾಗಿದ್ದರೂ ಎಂದು ಪುನರುಚ್ಚರಿಸಿರುವ ಅವರು, ಈ ಸತ್ಯವನ್ನು ಪಾಕಿಸ್ತಾನ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಒಸಮಾ ಬಿನ್ ಲಾಡೆನ್ ನನ್ನು ಅಮೆರಿಕಾ ಕೊಂದ ನಂತರ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೆಚ್ಚಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿರುವ ಮುಸ್ಲಿಮರ ಡಿಎನ್ ಎ ಭಾರತದಲ್ಲಿರುವ ಹಿಂದೂಗಳ ಡಿಎನ್ ಎ ಗೆ ಹೊಂದಿಕೆಯಾಗುತ್ತದೆ ಎಂದು ಬಹಳ ಹಿಂದೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದರು.