ಬಾಂಬೆ ಹೈಕೋರ್ಟ್ 
ದೇಶ

ಭಾರತ ಕೇವಲ ಹಿಂದೂಗಳದ್ದಾ? ಬಿಜೆಪಿಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಆಯೋಜಿಸಿದ್ದ ಬಿಜೆಪಿ ಆಡಳಿತವಿರುವ ನಾಗಪುರ ಮಹಾನಗರ....

ನಾಗ್ಪುರ್: ಏಡ್ಸ್  ಜಾಗೃತಿ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಆಯೋಜಿಸಿದ್ದ ಬಿಜೆಪಿ ಆಡಳಿತವಿರುವ ನಾಗಪುರ ಮಹಾನಗರ ಪಾಲಿಕೆ(ಎನ್ ಎಂಸಿ)ಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬಾಂಬೆ ಹೈಕೋರ್ಟ್ ನ ನಾಗಪುರ ಪೀಠ, ಭಾರತ ಕೇವಲ ಹಿಂದೂಗಳದ್ದಾ ಎಂದು ಕಟುವಾಗಿ ಪ್ರಶ್ನಿಸಿದೆ.
ವಿಶ್ವ ಆರೋಗ್ಯ ದಿನದ ಅಂಗವಾಗಿ ಎನ್ ಎಂಸಿ ಏಪ್ರಿಲ್ 7ರಂದು ಏಡ್ಸ್ ತಡೆಗೆ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಇದನ್ನು ವಿರೋಧಿಸಿ ನಿನ್ನೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ನಾಗ್ಪುರ್ ಪೀಠ, ಭಾರತ ಹಿಂದೂಗಳಿಗೆ ಮಾತ್ರ ಸೇರಿದ್ದಾ? ಎಂದು ಪ್ರಶ್ನಿಸುವ ಮೂಲಕ ಏಡ್ಸ್ ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸಾ ಪಠಿಸುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹನುಮಾನ್ ಚಾಲೀಸಾವನ್ನು ಮಾತ್ರ ಯಾಕೆ ಪಠಿಸಬೇಕು...ಕುರಾನ್, ಬೈಬಲ್ ಅಥವಾ ಇತರ ಧರ್ಮದ ಗ್ರಂಥಗಳನ್ನು ಯಾಕೆ ಪಠಿಸಲ್ಲ? ಹನುಮಾನ್ ಚಾಲೀಸಾಕ್ಕೂ ಏಡ್ಸ್ ಕುರಿತ ಅರಿವು ಮೂಡಿಸುವ ಕಾರ್ಯಕ್ರಮಕ್ಕೂ ಏನು ಸಂಬಂಧ? ಏಡ್ಸ್ ಕುರಿತು ಹಿಂದುಗಳಿಗೆ ಮಾತ್ರ ಗುತ್ತಿಗೆ ಕೊಟ್ಟಿದ್ದಾರಾ? ಇಂತಹ ಮಾರಕ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಹನುಮಾನ್ ಚಾಲೀಸಾ ಪಠಣ ಮಾಡುವುದು ಪರಿಹಾರವೇ ಎಂದು ನಾಗಪುರ ಪೀಠದ ಜಸ್ಟೀಸ್ ಭೂಷಣ್ ಗವಾಯಿ ಮತ್ತು ಸ್ವಪನ್ ಜೋಶಿ ನಾಗಪುರ ಮಹಾನಗರ ಪಾಲಿಕೆ ಪ್ರಶ್ನಿಸಿದ್ದಾರೆ. ಅಲ್ಲದೆ ನಾವು ಯಾವುದೇ ಧರ್ಮದ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿದ ಪೀಠ, ಏಡ್ಸ್ ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸಾ ಪಠಣ ಬೇಡ ಎಂದು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ. 
ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಹಾಗೂ ಏಡ್ಸ್ ಕುರಿತ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಕನಿಷ್ಠ ಒಂದು ಗಂಟೆಯಾದರೂ ಅಂತರ ಇರಲಿ ಎಂದು ಎನ್ ಎಂಸಿ ಹಾಗೂ ಕಾರ್ಯಕ್ರಮ ಆಯೋಜಿಸಿರುವ ದೇವಸ್ಥಾನದ ಟ್ರಸ್ಟ್ ಗೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.
ಎನ್ ಎಂಸಿಯ  ನಿರ್ಧಾರದ ವಿರುದ್ಧ ಮಾಜಿ ಕಾರ್ಪೊರೇಟರ್ ಜನಾರ್ದನ ಮೂನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಹಿಂದುತ್ವದ ಕಾರ್ಯಸೂಚಿಯನ್ನು ಹೇರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪಿಐಎಲ್ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ