ಚಂಡೀಘಡ: ನಕಲಿ ಪದವಿ ಪ್ರಮಾಣಪತ್ರ ನೀಡಿ ಸರ್ಕಾರಿ ಶಿಕ್ಷನ ಕೆಲಸ ಪಡೆದ ಆರೋಪದ ಮೇಲೆ ದೆಹಲಿಯ ಆಪ್ ಶಾಸಕ ಸುರೀಂದರ್ ಸಿಂಗ್ ಅವರ ವಿರುದ್ಧ ಹರಿಯಾಣ ಪೊಲೀಸರು ಮಂಗಳವಾರ ಕೇಸ್ ದಾಖಲಿಸಿದ್ದಾರೆ.
ಬಿಜೆಪಿ ನಾಯಕ ಕರಣ್ ಸಿಂಗ್ ತನ್ವರ್ ಅವರ ನೀಡಿದ ದೂರಿನ ಆಧಾರದ ಮೇಲೆ ದೆಹಲಿಯ ಕಾಂಟೋನ್ಮೆಟ್ ಶಾಸಕನ ವಿರುದ್ಧ ಜಾಜ್ಜರ್ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ತನ್ವರ್ ಅವರು ಆರ್ ಟಿಐ ಕಾಯ್ದೆಯಡಿ ಸುರೀಂದರ್ ಸಿಂಗ್ ಪದವಿ ಪ್ರಮಾಣಪತ್ರಗಳ ಪ್ರತಿಯನ್ನು ಪಡೆದುಕೊಂಡಿದ್ದು, ಆಪ್ ಶಾಸಕ ಕೇವಲ ಪಿಯುಸಿ ಪಾಸಾಗಿದ್ದಾರೆ. ಆದರೆ ಪದವಿಯಾಗಿರುವುದಾಗಿ ಹೇಳಿ ಕೆಲಸ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹರಿಯಾಣ ಆಪ್ ಮುಖಂಡ ನವೀನ್ ಜೈಹಿಂದ್ ಅವರು, ಇದು ಆಡಳಿತರೂಢ ಬಿಜೆಪಿ ಕುತಂತ್ರ. ಈ ರೀತಿ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಆಪ್ ಶಾಸಕರನ್ನು ಹೆದರಿಸಲಾಗುತ್ತಿದೆ ಎಂದಿದ್ದಾರೆ.