ಇಸ್ಲಾಮಾಬಾದ್: ಸಾರ್ಕ್ ರಾಷ್ಟ್ರಗಳ ಗೃಹ ಸಚಿವರುಗಳ ಸಮ್ಮೇಳನದಲ್ಲಿ ಭಾಗವಹಿಸಲು ಇಸ್ಲಾಮಾಬಾದ್ ಗೆ ರಾಜನಾಥ್ ಸಿಂಗ್ ಪ್ರಯಾಣ ಬೆಳೆಸಿದ್ದು, ರಾಜನಾಥ್ ಸಿಂಗ್ ಇಸ್ಲಾಮಾಬಾದ್ ತೇ ಭೇಟಿ ನೀಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ರಾಜನಾಥ್ ಸಿಂಗ್ ಅವರ ಇಸ್ಲಾಮಾಬಾದ್ ಭೇಟಿಗೆ ಪಾಕಿಸ್ತಾನದ ಉಗ್ರ ಸಂಘಟನೆ ಜೆಯುಡಿಯಿಂದ ಈ ಹಿಂದೆಯೇ ತೀವ್ರ ವಿರೋಧ ವ್ಯಾಕವಾಗಿ, ರಾಜನಾಥ್ ಸಿಂಗ್ ಅವರಿಗೆ ಪಾಕಿಸ್ತಾನ ಪ್ರವೇಶವನ್ನು ನಿರಾಕರಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.
ಇನ್ನು ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಭೇಟಿ ನೀಡುವುದು ಖಚಿತವಾಗುತ್ತಿದ್ದಂತೆಯೇ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖಂಡ ಸಯೀದ್ ಸಲಾಹುದ್ದೀನ್ ನೇತೃತ್ವದಲ್ಲಿ ರಾಜನಾಥ್ ಸಿಂಗ್ ಭೇಟಿಯನ್ನು ವಿರೋಧಿಸಿ ಪ್ರತಿಭಟನೆ ನಡೆದಿದೆ. ರಾಜನಾಥ್ ಸಿಂಗ್ ಸಾರ್ಕ್ ಸಮ್ಮೇಳನದಲ್ಲಿ ಮಾತ್ರ ಭಾಗಿಯಾಗಲಿದ್ದು, ದ್ವಿಪಕ್ಷೀಯ ಮಾತುಕತೆ ನಡೆಯುವುದು ಸಾಧ್ಯವಿಲ್ಲ ಎಂದು ಈಗಾಗಲೇ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.