ಬ್ರಸೆಲ್ಸ್: ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆ, ದೌರ್ಜನ್ಯದ ಬಗ್ಗೆ ಭಾರತ ಸರ್ಕಾರ ಧ್ವನಿ ಎತ್ತಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಸಮುದಾಯದಲ್ಲೂ ಬಲೂಚಿಸ್ತಾನದ ಪರ ನಿಲುವು ವ್ಯಕ್ತವಾಗಿದೆ.
ಬಲೂಚಿಸ್ತಾದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುರೋಪ್ ಸಂಸದ ಆಲ್ಬರ್ಟೊ ಕೈರೋ, ಬಲೂಚಿಸ್ತಾನದಲ್ಲಿರುವ ತಪ್ಪು ನೀತಿಗಳಿಗೆ ಪಾಕಿಸ್ತಾನವನ್ನು ಹೊಣೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಲೂಚಿಸ್ತಾನದ ಜನತೆಯ ದಾರುಣ ಸ್ಥಿತಿ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಪರಿಶೀಲನೆ ನಡೆಯುವ ಅಗತ್ಯವಿದೆ ಎಂದು ಆಲ್ಬರ್ಟೊ ಕೈರೋ ಹೇಳಿದ್ದಾರೆ. ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮತ್ತೊಂದು ಎಚ್ಚರಿಕೆ ಗಂಟೆಯಾಗಿದೆ, ಇಂತಹ ಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಇರುವುದು ಎರಡೇ ಆಯ್ಕೆ, ಒಂದು ಪಾಕಿಸ್ತಾನ ಎಲ್ಲಾ ಜಿಹಾದಿ ಗುಂಪುಗಳ ವಿರುದ್ಧ ಹೋರಾಡುವುದು ಎರಡನೆಯದು ಭಯೋತ್ಪಾದಕರಿಂದಲೇ ನಾಹವಾಗುವುದು ಎಂದು ಆಲ್ಬರ್ಟೊ ಕೈರೋ ಇಪಿ ಟುಡೇ.ಕಾಮ್ ಗೆ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ.