ದೇಶ

ದೆಹಲಿಯಲ್ಲಿ ಹೊಸ ಮದ್ಯದ ಅಂಗಡಿಗಳಿಗೆ ಅನುಮತಿ ಇಲ್ಲ: ಕೇಜ್ರಿವಾಲ್

ಹೊಸ ಮದ್ಯದ ಅಂಗಡಿಗಳಿಗೆ ಅನುಮತಿಯನ್ನು ಸ್ಪಷ್ಟವಾಗಿ ನಿರಾಕರಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈಗಿರುವ ಮದ್ಯದ ಅಂಗಡಿಗಳ ಭವಿಷ್ಯವನ್ನು ಸ್ಥಳೀಯ ಜನರೇ ನಿರ್ಧರಿಸುತ್ತಾರೆ...

ನವದೆಹಲಿ: ಹೊಸ ಮದ್ಯದ ಅಂಗಡಿಗಳಿಗೆ ಅನುಮತಿಯನ್ನು ಸ್ಪಷ್ಟವಾಗಿ ನಿರಾಕರಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈಗಿರುವ ಮದ್ಯದ ಅಂಗಡಿಗಳ ಭವಿಷ್ಯವನ್ನು ಸ್ಥಳೀಯ ಜನರೇ ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.

ಜನತೆಗೆ ಮದ್ಯದ ಅಂಗಡಿಗಳಿಂದ ಕಿರಿಕಿರಿ ಉಂಟಾಗುತ್ತಿದ್ದರೆ ಮೊಹಲ್ಲಾ ಸಭೆಗಳು ಮದ್ಯದ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಹಾಗೂ ಮುಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಿವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಮದ್ಯದ ಅಂಗಡಿಗಳ ಬಗ್ಗೆ ನಡೆಯುವ ಸಭೆಗಳಲ್ಲಿ ಆಯಾ ಮತಕ್ಷೇತ್ರದ ಶೇ.15 ರಷ್ಟು ಜನರು ಇರಬೇಕು ಅದರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಇರಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಮದ್ಯದ ಅಂಗಡಿಗಳು ಅಂಗಡಿಗಳ ಎದುರು ಗದ್ದಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು, ಒಂದು ವೇಳೆ ಅಕ್ರಮ ಚಟುವಟಿಕೆ, ಗದ್ದಲ ಉಂಟಾದಲ್ಲಿ ಮದ್ಯದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು, ಅಧಿಕೃತ ಆದೇಶ!

ಹೌದು ನಾವು ಒಂದ್ ರೀತಿ ಕಡಲ್ಗಳ್ಳರೇ...; ಹೆಮ್ಮೆ ಇದೆ: ಜಲಸಂಧಿಗೆ ದಿಗ್ಬಂಧನದ ವಿಷಯವಾಗಿ ಟ್ರಂಪ್ ಹೊಸ ವರಸೆ!

ಬೆಂಗಳೂರು: ಅನಾರೋಗ್ಯದಿಂದ ದಕ್ಷ ಅಧಿಕಾರಿ 39 ವರ್ಷದ SP ಲಾವಣ್ಯ ಹಠಾತ್‌ ನಿಧನ!

ಟಿಎಂಸಿ ಕಾರ್ಯಕರ್ತರಿಂದ ನಮಗೆ ಜೀವ ಬೆದರಿಕೆ ಇದೆ; ಮತ ಎಣಿಕೆ ವೇಳೆ ನಮಗೆ ಭದ್ರತೆ ಕೊಡಿ; ಬಂಗಾಳದಲ್ಲಿ ನೂರಾರು ಗ್ರಾಮಸ್ಥರಿಂದ ಪ್ರತಿಭಟನೆ

ಅನ್‌ಫಾಲೋ ಪ್ರಹಸನ ಬೆನ್ನಲ್ಲೇ ದಿಢೀರ್ ಅಂತ ಅಮಿತ್ ಶಾರನ್ನು ಭೇಟಿಯಾದ ರಿಷಭ್ ಶೆಟ್ಟಿ!

SCROLL FOR NEXT