ಪಿವಿ ಸಿಂಧು ಆಟವನ್ನು ನೋಡುತ್ತಾ ಸಲ್ಮಾನ್ ಖಾನ್ ತನ್ನ ತಾಯಿಗೆ ಹೇಳಿದ್ದು ಹೀಗೆ!
ರಿಯೋ ಒಲಂಪಿಕ್ಸ್ ಗೆ ರಾಯಭಾರಿಗಳಲ್ಲಿ ಒಬ್ಬರಾಗಿರುವ ಸಲ್ಮಾನ್ ಖಾನ್, ಒಲಂಪಿಕ್ಸ್ ನ ಪದಕ ವಿಜೇತೆ ಪಿವಿ ಸಿಂಧು ಅವರೊಂದಿಗೆ ತಾವು ತೆಗೆಸಿಕೊಂಡಿದ್ದ ಫೋಟೋವನ್ನು ಟ್ವಿಟರ್ ನಲ್ಲಿ ಅಪ್ ಡೇಟ್ ಮಾಡಿದ್ದಾರೆ.
ನವದೆಹಲಿ: ರಿಯೋ ಒಲಂಪಿಕ್ಸ್ ಗೆ ರಾಯಭಾರಿಗಳಲ್ಲಿ ಒಬ್ಬರಾಗಿರುವ ಸಲ್ಮಾನ್ ಖಾನ್, ಒಲಂಪಿಕ್ಸ್ ನ ಪದಕ ವಿಜೇತೆ ಪಿವಿ ಸಿಂಧು ಅವರೊಂದಿಗೆ ತಾವು ತೆಗೆಸಿಕೊಂಡಿದ್ದ ಫೋಟೋವನ್ನು ಟ್ವಿಟರ್ ನಲ್ಲಿ ಅಪ್ ಡೇಟ್ ಮಾಡಿದ್ದಾರೆ.
ರಿಯೋ ಒಲಂಪಿಕ್ಸ್ ನ ಬ್ಯಾಡ್ಮಿಂಟನ್ ಫೈನಲ್ ಪಂದ್ಯವನ್ನು ತಮ್ಮ ತಾಯಿಯೊಂದಿಗೆ ವೀಕ್ಷಿಸಿದ್ದಾಗಿ ಟ್ವಿಟರ್ ನಲ್ಲಿ ತಿಳಿಸಿರುವ ಸಲ್ಮಾನ್ ಖಾನ್, ಸಿಂಧು ಅವರೊಂದಿಗೆ ಫೋಟೋ ತೆಗೆಸಿಕೊಂಡಿರುವುದಾಗಿ ತಾಯಿಗೆ ಹೇಳಿದೆ ಎಂದು ಬರೆದಿದ್ದಾರೆ. ರಿಯೋ ಒಲಂಪಿಕ್ಸ್ ನ ಮಹಿಳಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.