ಮುಂಬೈ: ಕಾಂಗ್ರೆಸ್ ನಾಯಕ ಡಿವೈ ಪಾಟೀಲ್ ಅವರ ಪುತ್ರ ಅಜಿಂಕ್ಯಾ ಪಾಟೀಲ್ 100 ಕೋಟಿ ರುಪಾಯಿ ಬೆಲೆಬಾಳುವ ಫ್ಲಾಟ್ ವೊಂದನ್ನು ಖರೀದಿ ಮಾಡುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ.
ಮುಂಬೈನ ವರ್ಲಿಯಲ್ಲಿರುವ ಸಿಲ್ವರೆನ್ಸ್ ತೆರೇಸ್ ಅಪಾರ್ಟ್ ಮೆಂಟ್ ನಲ್ಲಿ ಮೂರು ಅಂತಸ್ತಿನ ಡೂಪ್ಲೆಕ್ಸ್ ಫ್ಲಾಟನ್ನು ಬಿಹಾರದ ಮಾಜಿ ರಾಜ್ಯಪಾಲರು ಆಗಿರುವ ಪಾಟೀಲ್ ಪುತ್ರ ಖರೀದಿಸಿದ್ದಾರೆ. ಇದರ ಬೆಲೆ 100 ಕೋಟಿ ರುಪಾಯಿ ಎಂದು ಹೇಳಲಾಗಿದೆ.
23 ಅಂತಸ್ತಿನ ಈ ಅಪಾರ್ಟ್ ಮೆಂಟ್ ಸಮುದ್ರದ ಪಕ್ಕದಲ್ಲಿದ್ದು, ಸಮುದ್ರ ವೀಕ್ಷಣೆಗೆ ಯೋಗ್ಯವಾಗಿದೆ. ಈ ಅಪಾರ್ಟ್ ಮೆಂಟ್ ನ 21, 22 ಹಾಗೂ 23ನೇ ಅಂತಸ್ತಿನ ಫ್ಲಾಟ್ ಗಳನ್ನು ಖರೀದಿಸಿದ್ದಾರೆ. ಈ ಫ್ಲಾಟ್ ನ ಮೂಲ ಬೆಲೆ 95.4 ಕೋಟಿ ಯಾಗಿದ್ದು ನೊಂದಣಿಗೆ 4.7 ಕೋಟಿ ರುಪಾಯಿ ವ್ಯಯಿಸಲಾಗಿದೆ.