ಸ್ವಿಟ್ಜರ್ಲ್ಯಾಂಡಿನ ಮೊರ್ಗ್ಸ್ ನಲ್ಲಿರುವ ಕೇಂದ್ರ ಕಚೇರಿಯಲ್ಲಿ ಮೊನ್ಸಂಟೊ ಚಿಹ್ನೆ
ನವದೆಹಲಿ: ನಿಯಂತ್ರಕ ಅನಿಶ್ಚಿತತೆಯಿಂದಾಗಿ, ಮುಂದಿನ ಪೀಳಿಗೆಯ ಕುಲಾಂತರಿ ಹತ್ತಿ ಬೀಜಗಳಿಗೆ ಭಾರತದಲ್ಲಿ ಅನುಮೋದನೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕಾದ ಜೈವಿಕ ತಂತ್ರಜ್ಞಾನ ಮೊನ್ಸಾಂಟೊ ಹಿಂತೆಗೆದುಕೊಂಡಿದೆ.
ಬೊಲ್ಲ್ ಗಾರ್ಡ್ -11 ರೌಂಡಪ್ ರೆಡಿ ಫ್ಲೆಕ್ಸ್ ಟೆಕ್ನಾಲಜಿಯ ವಾಣಿಜ್ಯ ಕೃಷಿಗೆ ಪಾರಿಸರಿಕ ತೆರವು ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಜುಲೈ 6ರಂದು ಹಿಂತೆಗೆದುಕೊಂಡಿದೆ.
''ಭಾರತದಲ್ಲಿ ಈ ವಾಣಿಜ್ಯ ಬೆಳೆಯನ್ನು ಜಾರಿಗೆ ತರುವ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ಕಾರಣ ವ್ಯಾಪಾರದಲ್ಲಿನ ಅನಿಶ್ಚಿತತೆ ಮತ್ತು ನಿಯಂತ್ರಕ ಪರಿಸರ. ಶುಲ್ಕ ಮತ್ತು ಕರಡು ಕಡ್ಡಾಯ ಪರವಾನಗಿ ಮಾರ್ಗಸೂಚಿಗಳ ಪರಿಚಯ ನಿಯಂತ್ರಣ ಇದಕ್ಕೆ ಕಾರಣ ಎಂದು ಮೊನ್ಸಾಂಟೊ ವಕ್ತಾರರು ತಿಳಿಸಿದ್ದಾರೆ.
ಈ ನಿರ್ಧಾರ ಇಂದು ಭಾರತದಲ್ಲಿ ಮಾರಾಟವಾಗುತ್ತಿರುವ ಹತ್ತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೂಡ ಅದು ಹೇಳಿದೆ.
ಮೊನ್ಸೆಂಟೊ ಭಾರತದಲ್ಲಿ ಮಹಿಕೊ ಮನ್ಸೊಂಟೊ ಬಯೋಟೆಕ್ ಲಿಮಿಟೆಡ್(ಎಂಎಂಬಿಎಲ್) ಮೂಲಕ ಹತ್ತಿ ಬೀಜಗಳನ್ನು ಮಾರಾಟ ಮಾಡುತ್ತಿದ್ದು, ಮಹಾರಾಷ್ಟ್ರ ಹೈಬ್ರಿಡ್ ಸೀಡ್ ನೊಂದಿಗೆ ಜಂಟಿ ಉದ್ಯಮವನ್ನು ಹೊಂದಿದೆ. ಎಂಎಂಬಿಎಲ್ 2002ರಿಂದ ಬಿಟಿ ಹತ್ತಿ ಬೀಜ ತಂತ್ರಜ್ಞಾನವನ್ನು ಅನೇಕ ಸ್ವದೇಶಿ ಕಂಪೆನಿಗಳಿಗೆ ಉಪ ಪರವಾನಗಿ ಮಾಡುತ್ತಿದೆ.