ದೇಶ

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದ ಆಸ್ಪತ್ರೆ: ತಂದೆಯ ಹೆಗಲಲ್ಲೇ ಕೊನೆಯುಸಿರೆಳೆದ ಬಾಲಕ

Shilpa D

ಕಾನ್ಪುರ: ಅನಾರೋಗ್ಯದಿಂದ ನರಳುತ್ತಿದ್ದ 12 ವರ್ಷದ ಬಾಲಕನಿಗೆ ಸರಿಯಾದ ವೇಳೆಯಲ್ಲಿ ಚಿಕಿತ್ಸೆ ಸಿಗದ ಕಾರಣ ತಂದೆಯ ತೋಳಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕಾನ್ಪುರದಲ್ಲಿ ನಡೆದಿದೆ. ಈ ಪ್ರಕರಣದಿಂದ ಕಾನ್ಪುರದ ಆಸ್ಪತ್ರೆಗಳ ಭಯಂಕರ ರೂಪ ಮತ್ತೆ ದರ್ಶನವಾಗಿದೆ.

ಆಗಸ್ಟ್ 26 ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ ಪಝಾಲ್ ಗಂಜ್ ನಿವಾಸಿಯಾದ ಅನ್ಸ್ ಎಂಬ ಬಾಲಕನನ್ನು ಆತನ ತಂದೆ ಆಸ್ಪತ್ರೆಗೆ ಕರೆತಂದಿದ್ದಾರೆ.
ಎಂರಡು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಎರಡು ದಿನಗಳಾದರೂ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಹಾಲ್ಲೆಟ್ ಆಸ್ಪತ್ರೆಗೆ ಬಾಲಕನನ್ನು ಆಕೆ ತಂದೆ ಕರೆದುಕೊಂಡು ಹೋಗಿದ್ದಾರೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ತಕ್ಷಣವೇ ಚಿಕಿತ್ಸೆ ನೈಡದ ವೈದ್ಯರು ಮಕ್ಕಳ ವಾರ್ಡ್ ಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅನ್ಸ್ ತಂದೆ ಸುನೀಲ್ ಮಕ್ಕಳ ವಾರ್ಡ್ ಗೆ ಕರೆದು ಕೊಂಡು ಹೋಗಿದ್ದಾರೆ. ಅಲ್ಲಿಗೆ ಕರೆದು ಕೊಂಡು ಹೋಗುವ ವೇಳೆಗೆ ಅನ್ಸ್ ತನ್ನ ತಂದೆಯ ಹೆಗಲ ಮೇಲೆಯೇ ಸಾವನ್ನಪ್ಪಿದ್ದ. ವೈದ್ಯರು ಕೂಡಲೇ ಚಿಕಿತ್ಸೆ ಆರಂಭಿಸಿದ್ದರೇ ನನ್ನ ಮಗ ಸಾಯುತ್ತಿರಲಿಲ್ಲ ಎಂದು ಅನ್ಸ್ ತಂಜದೆ ಸುನೀಲ್ ಆರೋಪಿಸಿದ್ದಾರೆ.

ಹಾಲ್ಲೆಟ್ ಆಸ್ಪತ್ರೆ ನಿರ್ಲಕ್ಷ್ಯವೇ ನನ್ನ ಮಗನ ಸಾವಿಗೆ ಕಾರಣ, ನಡೆಯಲಾರದ ಸ್ಥಿತಿಯಲ್ಲಿದ್ದ ನನ್ನ ಮಗನನ್ನು ನಾನು ಹೆಗಲ ಮೇಲೆ ಹೊತ್ತುಕೊಂಡಿದ್ದೆ, ಈ ವೇಳೆ ಆಸ್ಪತ್ರೆಯವರು ನನಗೆ ಒಂದು ಸ್ಟ್ರೆಚರ್ ಕೂಡ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.

SCROLL FOR NEXT