ಅಶ್ಲೀಲ ಚಿತ್ರ 
ದೇಶ

ಪುಣೆಯ ಕರ್ವೆ ರಸ್ತೆಯಲ್ಲಿನ ಬಿಲ್ ಬೋರ್ಡ್ ನಲ್ಲಿ ಅಶ್ಲೀಲ ಚಿತ್ರ ಪ್ರಸಾರ

ಜನದಟ್ಟನೆಯಿಂದ ಕೂಡಿರುವ ಪ್ರಮುಖ ಕರ್ವೆ ರಸ್ತೆಯಲ್ಲಿ ಅಳವಡಿಸಲಾಗಿದ್ದ ಬೃಹತ್ ಬಿಲ್ ಬೋರ್ಡ್ ವೊಂದರಲ್ಲಿ ಪೋರ್ನ್(ಅಶ್ಲೀಲ) ಚಿತ್ರವೊಂದು ಕಾಣಿಸಿದ ಘಟನೆ ತಡವಾಗಿ...

ಪುಣ: ಜನದಟ್ಟನೆಯಿಂದ ಕೂಡಿರುವ ಪ್ರಮುಖ ಕರ್ವೆ ರಸ್ತೆಯಲ್ಲಿ ಅಳವಡಿಸಲಾಗಿದ್ದ ಬೃಹತ್ ಬಿಲ್ ಬೋರ್ಡ್ ವೊಂದರಲ್ಲಿ ಪೋರ್ನ್(ಅಶ್ಲೀಲ) ಚಿತ್ರವೊಂದು ಕಾಣಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವ ಟೆಕ್ನೀಶಿಯನ್ ವಿರುದ್ಧ ಪ್ರಕರಣ ದಾಖಲಾಗಿದೆ. 
ಭಾನುವಾರ ಈ ಬಿಲ್ ಬೋರ್ಡ್ ನಲ್ಲಿ ಅಶ್ಲೀಲ ದೃಶ್ಯ ಪ್ರಸಾರವಾಗಿತ್ತು. ಇದನ್ನು ಕಂಡ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ವೈರಲ್ ಆಗುತ್ತಿದ್ದಂತೆ ಡೆಕ್ಕನ್ ಜಿಮ್ ಖಾನಾ ಪೊಲೀಸ್ ಠಾಣೆ ಪೊಲೀಸರು ಟೆಕ್ನೀಶಿಯನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 
ಮಾಹಿತಿ ತಂತ್ರಜ್ಞಾನ ಕಾಯ್ದಿ ಪರಿಚ್ಛೇದ 67ರ ಅಡಿಯಲ್ಲಿ ಟೆಕ್ನೀಶಿಯನ್ ನಿತೇಶ್ ಶೇಲಾರ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಆತನ ಪತ್ತೆಗೆ ಜಾಲ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರೀಕ್ಷೆ ಅಕ್ರಮ; ಜಾರ್ಖಂಡ್ ಸಿಎಂ ಸೊರೇನ್, ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಪ್ರತಿಕೃತಿ ದಹಿಸಿ JPSC-JSSC ಆಕಾಂಕ್ಷಿಗಳ ಪ್ರತಿಭಟನೆ

NLSIU ಘಟಿಕೋತ್ಸವ: NALSAR ಮಾದರಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಆಹ್ವಾನ ವಿರೋಧಿಸಿದ ಬೆಂಗಳೂರು ಉನ್ನತ ಕಾನೂನು ಕಾಲೇಜು!

ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

SIR ಪ್ರಕ್ರಿಯೆ ಯಶಸ್ಸು: ಬಿಹಾರ ಚುನಾವಣೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜಪಾನ್‌ಗಳನ್ನು ಮೀರಿಸಿದೆ: CEC ಜ್ಞಾನೇಶ್ ಕುಮಾರ್

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video