ರಾಹುಲ್ ಗಾಂಧಿ-ಆರ್ ಎಸ್ ಎಸ್ ಜಟಾಪಟಿ 
ದೇಶ

ಒಂದಲ್ಲ ಒಂದು ದಿನ ರಾಹುಲ್ ಆರ್ ಎಸ್ ಎಸ್ ಕ್ಷಮಾಪಣೆ ಕೋರಲೇಬೇಕು: ಬಿಜೆಪಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮರೆವಿನ ರೋಗದಿಂದ ನರಳುತ್ತಿದ್ದು, ಮಹಾತ್ಮಾ ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ಕಾರಣ ಎಂಬ ಅವರ ಹೇಳಿಕೆಗೆ ಒಂದಲ್ಲ ಒಂದು ದಿನ ಆರ್ ಎಸ್ ಎಸ್ ಕ್ಷಮಾಪಣೆ ಕೋರುವ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮರೆವಿನ ರೋಗದಿಂದ ನರಳುತ್ತಿದ್ದು, ಮಹಾತ್ಮಾ ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ಕಾರಣ ಎಂಬ ಅವರ ಹೇಳಿಕೆಗೆ ಒಂದಲ್ಲ ಒಂದು ದಿನ ಆರ್ ಎಸ್ ಎಸ್ ಕ್ಷಮಾಪಣೆ ಕೋರುವ ಕಾಲ ಬಂದೆ ಬರುತ್ತದೆ ಎಂದು ಭಾರತೀಯ ಜನತಾ ಪಕ್ಷ ಗುರುವಾರ ಹೇಳಿದೆ. 
"ಕಾಂಗ್ರೆಸ್ ನ ಸದ್ಯದ ಸ್ಥಿತಿಗೆ ಆರ್ ಎಸ್ ಎಸ್ ಕಾರಣ ಎಂದು ರಾಹುಲ್ ಗಾಂಧಿ ತಿಳಿದಿದ್ದಾರೆ ಮತ್ತು ಅದಕ್ಕೆ ಅವರು ರಾಷ್ಟ್ರಭಕ್ತ ಸಂಘಟನೆಯ ಮೇಲೆ ದಾಳಿ ನಡೆಸುತ್ತಿದ್ದಾರೆ. ದೇಶಕ್ಕಾಗಿ ಆರ್ ಎಸ್ ಎಸ್ ಮಾಡುತ್ತಿರುವ ಕೆಲಸ ಇಡೀ ದೇಶಕ್ಕೆ ಗೊತ್ತಿದೆ" ಎಂದು ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ವರದಿಗಾರರಿಗೆ ಹೇಳಿದ್ದಾರೆ. 
"ಅವರು (ರಾಹುಲ್) ಈ ಪ್ರಕರಣದಲ್ಲಿ ಈಗಾಗಲೇ ಎರಡು ಬಾರಿ ಯು-ಟರ್ನ್ ಮಾಡಿದ್ದಾರೆ. ಒಂದು ದಿನ ವರು ಖಂಡಿತಾ ಕ್ಷಮಾಪಣೆ ಕೋರಲಿದ್ದಾರೆ" ಎಂದು ಕೂಡ ಅವರು ಹೇಳಿದ್ದಾರೆ. 
ರಾಹುಲ್ ಗಾಂಧಿ ಒಂದು ದಿನ ಏನನ್ನೋ ಹೇಳುತ್ತಾರೆ ಮತ್ತೊಂದು ದಿನ ಅವರ ನಿಲುವನ್ನು ಬದಲಿಕೊಳ್ಳುತ್ತಾರೆ, ಹೀಗೆ ಅವರು ಸಂಪೂರ್ಣ ಗೊಂದಲದಲ್ಲಿದ್ದಾರೆ ಎಂದು ಕೂಡ ಹುಸೇನ್ ಹೇಳಿದ್ದಾರೆ. 
"ಕಾಂಗ್ರೆಸ್ ನಿಂದಾಗಲಿ, ರಾಹುಲ್ ಗಾಂಧಿ ಅವರಿಂದಾಗಲಿ ಆರ್ ಎಸ್ ಎಸ್ ಗೆ ಪ್ರಮಾಣ ಪತ್ರ ಬೇಕಿಲ್ಲ. ದೇಶವನ್ನು ಪ್ರೀತಿಸುವರ ಮೇಲೆ ದಾಳಿ ಮಾಡುವುದು ಕಾಂಗ್ರೆಸ್ ಗೆ ಹವ್ಯಾಸವಾಗಿಬಿಟ್ಟಿದೆ. ಹಿಂದೆ ಕೂಡ ಹಲವು ಶಕ್ತಿಯುತ ಕಾಂಗ್ರೆಸ್ ಮುಖಂಡರು ಆರ್ ಎಸ್ ಎಸ್ ವಿರುದ್ಧ ಆಪಾದನೆ ಮಾಡಿದ್ದರು ದೇಶದ ಜನತೆ ಅದನ್ನು ನಿರಾಕರಿಸಿದೆ. ಆರ್ ಎಸ್ ಎಸ್ ವಿರುದ್ಧದ ರಾಹುಲ್ ಗಾಂಧಿ ಅವರ ನಿಲುವು ರಾಜಕೀಯವಾಗಿದ್ದರೆ ಅದು ಕಾಂಗ್ರೆಸ್ ಗಷ್ಟೇ ಕೆಟ್ಟ ಹೆಸರು ತರದೇ ರಾಹುಲ್ ಅವರಿಗೂ ಕೂಡ ಕೆಟ್ಟ ಹೆಸರು ತರಲಿದೆ" ಎಂದು ಹುಸೇನ್ ಹೇಳಿದ್ದಾರೆ. 
ರಾಹುಲ್ ಗಾಂಧಿ ಮರೆವಿನ ರೋಗದಿಂದ ನರಳುತ್ತಿದ್ದಾರೆ ಎಂದಿರುವ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ, ರಾಹುಲ್ ಹೇಳಿಕೆಗಳಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದಿದ್ದಾರೆ. "ಇದರ ಬಗ್ಗೆ ಕೋರ್ಟ್ ತೀರ್ಪು ನೀಡಲಿ" ಎಂದು ಕೂಡ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!