ನವದೆಹಲಿ: 500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಎದುರಾಗಿರುವ ಹಣದ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಕ್ ಶೀಘ್ರದಲ್ಲೇ 20 ಮತ್ತು 50 ನೋಟುಗಳನ್ನು ಮುದ್ರಿಸಲಿದೆ.
ಆರ್ಬಿಐ ತನ್ನ ಪ್ರಕಟಣೆಯಲ್ಲಿ ಶೀಘ್ರದಲ್ಲೇ 20 ಹೊಸ ನೋಟುಗಳನ್ನು ಆರ್ಬಿಐ ಮುದ್ರಿಸಲಿದ್ದು ಇದರಲ್ಲಿ ಮಹಾತ್ಮ ಗಾಂಧಿ ಸೀರೀಸ್ 2005, ಎರಡೂ ಸಂಖ್ಯಾ ಪ್ಯಾನಲ್ ಗಳಲ್ಲಿ L ಎಂಬ ಇನ್ಸೆಂಟ್ ಲೆಟರ್ ಆರ್ಬಿಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿದ್ದು ಮುದ್ರಣ ಇಸವಿ 2016 ಎಂದು ಅಚ್ಚಾಗಿರುತ್ತದೆ ಎಂದು ತಿಳಿಸಿದೆ.
20 ರುಪಾಯಿ ನೋಟಿನಂತೆ 50 ಹೊಸ ನೋಟಿನಲ್ಲೂ ಮಹಾತ್ಮ ಗಾಂಧಿ ಸೀರಿಸ್ 2005 ಇರಲಿದೆ. ನೋಟುಗಳಲ್ಲಿ ಆರ್ಬಿಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿದ್ದು ಮುದ್ರಣ ಇಸವಿ 2016 ಎಂದಿರಲಿದ್ದು, ಇನ್ಸೆಂಟ್ ಲೆಟರ್ ಮಾತ್ರ ಇರುವುದಿಲ್ಲ.
ಹೊಸ ನೋಟುಗಳ ಜತೆಗೆ ಹಳೆಯ ನೋಟುಗಳು ಚಲಾವಣೆಯಲ್ಲಿ ಇರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.