ದೇಶ

ಪ್ರಧಾನಿ ಮೋದಿ ಖುದ್ದು ಭ್ರಷ್ಟ; ನನ್ನ ಬಳಿ ಸಾಕ್ಷ್ಯ ಇದೆ: ರಾಹುಲ್ ಗಾಂಧಿ

Manjula VN

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಗರಣಗಳಲ್ಲಿ ಭಾಗಿಯಾಗಿದ್ದು, ಭ್ರಷ್ಟಾಚಾರ ನಡೆಸಿರುವುದಕ್ಕೆ ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ಹೇಳಿದ್ದಾರೆ.

ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅವರು, ನನ್ನ ಬಳಿ ಸಾಕ್ಷ್ಯಾಧಾರಗಳಿರುವ ಕಾರಣ ಪ್ರಧಾನಿ ಮೋದಿಯವರು ಭಯಪಡುತ್ತಿದ್ದಾರೆ. ಸಂಸತ್ತಿನಲ್ಲಿ ಮಾತನಾಡುವುದು ನಮ್ಮ ಹಕ್ಕಾಗಿದ್ದು, ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಸ್ಪೀಕರ್ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೆ, ಸರ್ಕಾರ ನಮಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಆಡಳಿತಾರೂಢ ಸರ್ಕಾರ ನಮಗೆ ಸಂಸತ್ತಿನಲ್ಲಿ ಮಾತನಾಡಲು ಬಿಡುತ್ತಿಲ್ಲ. ನೋಟು ನಿಷೇಧ ಕುರಿತಂತೆ ಮಾತನಾಡಲು ನಮಗೆ ಅವಕಾಶ ಸಿಕ್ಕಿದ್ದೇ ಆದರೆ, ಈ ಬಗ್ಗೆ ನಾನು ಮಾತನಾಡುತ್ತೇನೆ. ನಾನು ಮಾತನಾಡಲು ಆರಂಭಿಸಿದರೆ, ಮೋದಿಯವರು ಸಂಸತ್ತಿನಲ್ಲಿ ಕೂರಲು ಸಾಧ್ಯವಾಗುವುದಿಲ್ಲ. ದೇಶದ ಇತಿಹಾಸದಲ್ಲಿಯೇ ನೋಟು ನಿಷೇಧ ದೊಡ್ಡ ಹಗರಣವಾಗಿದ್ದು, ಈ ಬಗ್ಗೆ ಲೋಕಸಭೆಯಲ್ಲಿ ನಾನು ಮಾತನಾಡಬೇಕು. ಎಲ್ಲವನ್ನು ಸಂಸತ್ತಿನಲ್ಲಿಯೇ ನಾನು ಮಾತನಾಡುತ್ತೇನೆಂದು ತಿಳಿಸಿದ್ದಾರೆ.

ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟರೆ, ಬಲೂನ್ ಬ್ಲಾಸ್ಟ್ ಆಗುತ್ತದೆ. ಕಳೆದ ಒಂದು ತಿಂಗಳಿನಿಂದಲೂ ಎಲ್ಲಾ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಚರ್ಚೆ ನಡೆಸುತ್ತಿದೆ. ಚರ್ಚೆಗೆ ಪ್ರಧಾನಿ ಮೋದಿಯವರು ಆಗಮಿಸುವಂತೆ ಆಗ್ರಹಿಸುತ್ತಿದೆ. ಆದರೆ, ಆಡಳಿತಾರೂಢ ಕೇಂದ್ರ ಸರ್ಕಾರಕ್ಕೆ ಚರ್ಚೆ ಬೇಡವಾಗಿದೆ ಎಂದು ಹೇಳಿದ್ದಾರೆ.

SCROLL FOR NEXT