ನವದೆಹಲಿ: ಗಣ್ಯರ ಬಳಕೆಗೆ 12 ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದ ಸಂಬಂಧ ರು 3,767 ಕೋಟಿ ರು ಮೊತ್ತದ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಮತ್ತು ಇನ್ನಿಬ್ಬರು ಆರೋಪಿಗಳನ್ನು ಇನ್ನೂ 7 ದಿನಗಳ ಕಸ್ಟಡಿಗೆ ನೀಡುವಂತೆ ಸಿಬಿಐ ಕೋರಿದೆ.
ಡಿಸೆಂಬರ್ 14 ರವರೆಗೆ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರನ್ನು ಸಿಬಿಐ ಕಸ್ಟಡಿಗೆ ನೀಡಲಾಗಿತ್ತು. ಇಂದು ಕಸ್ಟಡಿ ಅವಧಿ ಮುಗಿದಿರುವುದರಿಂದ, ಸಿಬಿಐ ಮತ್ತಷ್ಟು ದಿನಗಳ ಕಾಲಾವಕಾಶ ಕೋರಿದೆ.
ಸಿಬಿಐ ಕೋರ್ಟ್ ವಿಶೇಷ ಜಡ್ಜ್ ಅರವಿಂದ್ ಕುಮಾರ್ ಅಧಿಕಾರಿಗಳ ಬೇಡಿಕೆ ಪರಿಶೀಲಿಸಿದ್ದಾರೆ.