ಲಖನೌ: ದುಬಾರಿ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದು, ದೇಶ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷ ಸೋಮವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಎಸ್ ಪಿ ಪಕ್ಷದ ನಾಯಕ ಸುಧೀಂದ್ರ ಭಡೋರಿಯಾ ಅವರು, ನೋಟು ನಿಷೇಧದಿಂದ ಕಾಳಧನಿಕರು ಸಿಕ್ಕಿ ಬೀಳುತ್ತಾರೆಂದು ಮೋದಿ ಹೇಳುತ್ತಿದ್ದಾರೆ. ಆದರೆ, ಈ ವರೆಗೂ ಯಾರೊಬ್ಬರನ್ನು ಸರ್ಕಾರ ಬಂಧನಕ್ಕೊಳಪಡಿಸಿಲ್ಲವೇಕೆ? ಮೋದಿಯವರು ಮೊದಲು ಈ ಪ್ರಶ್ನೆಗೆ ಉತ್ತರ ನೀಡಬೇಕಿದೆ ಎಂದು ಹೇಳಿದ್ದಾರೆ.
ಮೋದಿ ವಾಸ್ತವಿಕತೆಯನ್ನು ಮರೆಮಾಚುತ್ತಿದ್ದು, ತಮ್ಮ ಹೇಳಿಕೆಗಳ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅವರನ್ನು ದೇಶ ಎಂದಿಗೂ ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.