ನಾಪತ್ತೆಯಾಗಿರುವ ವಿದ್ಯಾರ್ಥಿಗಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು 
ದೇಶ

ಜೆಎನ್ ಯು ವಿದ್ಯಾರ್ಥಿ ನಾಪತ್ತೆ: ಗೆಳೆಯರ ಸುಳ್ಳುಪತ್ತೆ ಪರೀಕ್ಷೆಗೆ ಮುಂದಾದ ಅಧಿಕಾರಿಗಳು!

ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ಪ್ರಕರಣ ದೆಹಲಿ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ವಿದ್ಯಾರ್ಥಿ ಪತ್ತೆಗಾಗಿ ಪೊಲೀಸರು ಇದೀಗ ನಜೀಬ್ ಗೆಳೆಯರನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸಲು...

ನವದೆಹಲಿ: ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ಪ್ರಕರಣ ದೆಹಲಿ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ವಿದ್ಯಾರ್ಥಿ ಪತ್ತೆಗಾಗಿ ಪೊಲೀಸರು ಇದೀಗ ನಜೀಬ್ ಗೆಳೆಯರನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ನಿನ್ನೆಯಷ್ಟೇ ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ ಆವರಣ ಸುತ್ತಲೂ ಪೊಲೀಸರು ತಪಾಸಣೆ ನಡೆಸಿದ್ದರು. 12 ಹಿರಿಯ ಪೊಲೀಸರು ಸೇರಿದಂತೆ 600 ಹೆಚ್ಚು ಪೊಲೀಸರು ವಿವಿಯ ಆವರಣದ ಸುತ್ತಲೂ ಹುಡುಕಾಟ ನಡೆಸಿದ್ದರು.

ವಿದ್ಯಾರ್ಥಿ ಹುಡುಕವಲ್ಲಿ ಪೊಲೀಸರು ತಡ ಹಾಗೂ ವಿಫಲವಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ದೆಹಲಿ ಪೊಲೀಸರ ವಿರುದ್ಧ ಕಿಡಿ ಕಾರಿದ್ದರು.

ನಜೀಬ್ ನಾಪತ್ತೆ ಕುರಿತಂತೆ ಮಾತನಾಡಿರುವ ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಮೋಹಿತ್ ಪಾಂಡೆ ಅವರು, ನಜೀಬ್ ಹುಡುಕುವಲ್ಲಿ ಪೊಲೀಸರು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಯಾವುದೇ ನಿಯಮ ಹಾಗೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ. ನಜೀಬ್ ಗೆ ಹೊಡೆದವರನ್ನು ವಿಚಾರಣೆಗೊಳಪಡಿಸುತ್ತಿಲ್ಲ ಎಂದು ಹೇಳಿದ್ದಾರೆ.

27 ವರ್ಷದ ನಜೀಬ್ ಉತ್ತರ ಪ್ರದೇಶದ ಮೂಲದವನಾಗಿದ್ದು, ಜೆಎನ್ ಯುವಿನಲ್ಲಿ ಬಯೋಟೆಕ್ನಾಲಜಿ ವ್ಯಾಸಾಂಗ ಮಾಡುತ್ತಿದ್ದ. ಅ.14 ರ ರಾತ್ರಿ ವಿಶ್ವವಿದ್ಯಾಲಯದ ಆವರಣದಲ್ಲಿ ಎಬಿವಿಪಿ ಹಾಗೂ ನಜೀಬ್ ಗುಂಪಿನ ನಡುವೆ ಗಲಾಟೆ ನಡೆದಿತ್ತು. ಈ ಘರ್ಷಣೆ ಬಳಿಕ ಮರುದಿನ ಅ.15ರ ರಾತ್ರಿಯಿಂದ ನಜೀಬ್ ಕಾಣೆಯಾಗಿದ್ದ. ಅಂದಿನಿಂದಲೂ ದೆಹಲಿ ಪೊಲೀಸರು ವಿದ್ಯಾರ್ಥಿಗಾಗಿ ತೀವ್ರ ಶೋಧ ನಡೆಸುತ್ತಲೇ ಇದ್ದಾರೆ. ಆದರೆ, ಈ ವರೆಗೂ ವಿದ್ಯಾರ್ಥಿ ಕುರಿತು ಯಾವುದೇ ಸುಳಿವು ದೊರಕಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ayodhya: ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: 8 ಆರೋಪಿಗಳ ವಿರುದ್ಧ FIR ದಾಖಲು!

Women T-20 World cup: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಗೆಲುವು!

ಸೇಡಿಗಾಗಿ ಖಾಸಗಿ ಪೋಟೋ, ವಿಡಿಯೋ ವೈರಲ್, ಬೆದರಿಕೆ ಪ್ರಕರಣ: ಕಡ್ಡಾಯವಾಗಿ FIR ದಾಖಲಿಸಬೇಕು, ಪೊಲೀಸರಿಗೆ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ!

Bidadi Township Project: ಸಿಎಂ ಡಿಕೆ ಶಿವಕುಮಾರ್‌ಗೆ 2ನೇ ಪತ್ರ ಬರೆದ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ!

ಗರಿಷ್ಠ ಅವಧಿ ಸಂಪೂರ್ಣ: KSCA ಕಾರ್ಯದರ್ಶಿ ಸಂತೋಷ್ ಮೆನನ್ ಅನರ್ಹ, BCCI ಒಂಬುಡ್ಸ್‌ಮನ್ ಆದೇಶ!