ದೇಶ

ತೀವ್ರಗೊಂಡ 'ನಾಗಾ' ಪ್ರತಿಭಟನೆ: ಮಣಿಪುರದಲ್ಲಿ ಭದ್ರತೆ ಪರಿಶೀಲಿಸಿ ಸೇನಾ ಮುಖ್ಯಸ್ಥ

Manjula VN

ಇಂಫಾಲ: ಹೊಸ ಜಿಲ್ಲೆಗಳ ರಚನೆ ಕುರಿತಂತೆ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಸಂಯುಕ್ತ ನಾಗಾ ಮಂಡಳಿಗಳ ಪ್ರತಿಭಟನೆ ತೀವ್ರಗೊಂಡಿದ್ದು, ಈ ಹಿನ್ನಲೆಯಲ್ಲಿ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರು ಶನಿವಾರ ಮಣಿಪುರಕ್ಕೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲನೆ ನಡೆಸಿದ್ದಾರೆ.

ಪರಿಸ್ಥಿತಿ ಹದಗಟ್ಟ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಮಣಿಪುರದಲ್ಲಿಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದರು.

ಇದೀಗ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರು ಮಣಿಪುರಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಮಣಿಪುರ ಸರ್ಕಾರ ಇತ್ತೀಚೆಗೆ 7 ಜಿಲ್ಲೆಗಳನ್ನು ಹೊಸದಾಗಿ ರಚನೆ ಮಾಡಿತ್ತು. ಆಡಳಿತಕ್ಕೆ ಯಾವುದೇ ತೊಡಕುಗಳು ಎದುರಾಗದಂತೆ ಹಾಗೂ ಸುಗಮವಾಗಿ ಸರ್ಕಾರ ನಡೆಸಲು ಈ ರಚನೆ ಮಾಡಿರುವುದಾಗಿ ರಾಜ್ಯ ಸರ್ಕಾರ ಹೇಳಿಕೊಂಡಿತ್ತು. ಆದರೆ, ಇದನ್ನು ಒಪ್ಪದ ಸಂಯುಕ್ತ ನಾಗಾ ಮಂಡಳಿ 7 ಜಿಲ್ಲೆಗಳ ರಚನೆ 'ಗ್ರೇಟರ್ ನಾಗಾಲಿಂ' ರಚನೆ ಪ್ರಯತ್ನವನ್ನು ಮುರಿಯುವ ಯತ್ನ ಎಂದು ವ್ಯಾಖ್ಯಾನಿಸಿತ್ತು. ನಾಗಾಗಳ ನಡುವೆ ಒಡಕುಂಟು ಮಾಡಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿತ್ತು. ಅಲ್ಲದೆ, ಸರ್ಕಾರದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದ ನಾಗಾಗಳು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಇದೀಗ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

SCROLL FOR NEXT