ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧೀ ಸಹರಾ ಡೈರಿಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭ್ರಷ್ಟಾಚಾರಿ ಎಂದು ಜರಿದಿದ್ದರು. ಆದರೆ ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ದೆಹಲಿ ಸಿಎಂ ಶೀಲಾ ದೀಕ್ಷಿತ್ ಸಹರಾ ಡೈರಿ ಬರೀ ಊಹಾಪೋಹ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದ ದಾಖಲೆಯಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಹಣ ಪಡೆದಿರುವ ಬಗ್ಗೆ ಸಹರಾ ಡೈರಿಯಲ್ಲಿ ಉಲ್ಲೇಖವಿದೆ. ಜತೆಗೆ ದೆಹಲಿ ಮುಖ್ಯಮಂತ್ರಿಯಾಗದ್ದ ಶೀಲಾ ದೀಕ್ಷಿತ್ ಅವರಿಗೂ ಹಣ ನೀಡಿದ ಉಲ್ಲೇಖವಿದ್ದು, ಇದನ್ನು ಸಾರಸಗಟಾಗಿ ತಿರಸ್ಕರಿಸಿರುವ ಶೀಲಾ ಅವರು ಇದೆಲ್ಲವೂ ಬರೀ ಊಹಾಪೋಹ. ಆರೋಪಗಳಲ್ಲಿ ಒಂದಿಷ್ಟೂ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಸಹರಾ ಡೈರಿ ಬಗ್ಗೆ ಈಗಾಗಲೇ ತನ್ನ ಅಭಿಪ್ರಾಯಗಳನ್ನು ಹೇಳಿದೆ. ಸಹರಾ ಡೈರಿ ಸಂಬಂಧ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸುಪ್ರೀಂ ಹೇಳಿದೆ. ಸಹರಾ ಡೈರಿಯಲ್ಲಿನ ಹೆಸರಿನ ಪಟ್ಟಿಯನ್ನು ಟ್ವೀಟ್ ಮಾಡಿರುವುದು ನನಗೆ ಅಚ್ಚರಿ ಉಂಟು ಮಾಡಿದೆ. ಪಟ್ಟಿಯಲ್ಲಿ ಅನೇಕ ಸಿಎಂಗಳ ಹೆಸರುಗಳಿವೆ. ಇದರಲ್ಲಿ ನನ್ನ ಹೆಸರನ್ನು ಮಾತ್ರವೇ ಏಕೆ ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಸಹರಾ ಡೈರಿಯ ಉಲ್ಲೇಖವನ್ನು ಮುಂದಿಟ್ಟುಕೊಂಡು ಪ್ರಧಾನಿ ವಿರುದ್ಧ ಸಮರ ಸಾರಿದ್ದ ರಾಹುಲ್ ಗಾಂಧೀಗೆ ಇದೀಗ ಭಾರೀ ಹಿನ್ನಡೆಯಾಗಿದೆ.