ಬಿಹಾರ: ವಿದೇಶಿ ಮಹಿಳೆ ದೇಹವನ್ನು ಭಕ್ಷಿಸಿದ ಬೀದಿ ನಾಯಿಗಳು
ಬಿಹಾರ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯ ಹೊರಗಡೆ ಇಟ್ಟಿದ್ದ ವಿದೇಶಿಗನ ಮೃತದೇಹವನ್ನು ಬೀದಿ ನಾಯಿಗಳು ತಿಂದು ಹಾಕಿವೆ ಎಂದು ಪೊಲೀಸರು...
ಪಾಟ್ನಾ: ಬಿಹಾರ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯ ಹೊರಗಡೆ ಇಟ್ಟಿದ್ದ ವಿದೇಶಿಗನ ಮೃತದೇಹವನ್ನು ಬೀದಿ ನಾಯಿಗಳು ತಿಂದು ಹಾಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೇಗುಸರೈನಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಭೂತಾನ್ ಮಹಿಳೆ 53 ವರ್ಷದ ಪೇಮ ಚೂಡೆನ್ ಮೃತಪಟ್ಟಿದ್ದರು. ಆಕೆಯ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಬಿಹಾರ ಆಸ್ಪತ್ರೆಗೆ ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗಯಾ ಜಿಲ್ಲೆಯ ಬುದ್ಧ ಗಯಾದಲ್ಲಿ ಟಿಬೇಟ್ ನ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಜನವರಿಯಲ್ಲಿ ನಡೆಸಿಕೊಡಲಿದ್ದ ಕಾಲಚಕ್ರ ಪೂಜೆಗಾಗಿ ಇನ್ನಿತರ ಲಾಮಾ ಅನುಯಾಯಿಗಳ ಜತೆ ಭಾರತಕ್ಕೆ ಬಂದಿದ್ದರು. ಇವರೆಲ್ಲರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಪೇಮ ಚೂಡೆನ್ ಅವರು ಮೃತಪಟ್ಟಿದ್ದರು.
ಮೃತ ಮಹಿಳೆಯ ದೇಹದ ಕೆಲ ಭಾಗಗಳನ್ನು ಬೀದಿ ನಾಯಿಗಳು ಭಕ್ಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.