ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ್ದ ಯುವಕ ದಿಲಿಪನ್ ಮಹೇಂದ್ರನ್ 
ದೇಶ

ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ್ದ ಯುವಕನಿಗೆ ಪೊಲೀಸರು ಥಳಿಸಿ ಕೈ ಮುರಿದಿದ್ದಾರೆ: ಆರೋಪಿ ಪರ ವಕೀಲ

ರಾಷ್ಟ್ರಧ್ವವನ್ನು ಸುಟ್ಟ ಅರೋಪದಡಿ ಬಂಧನಕ್ಕೊಳಗಾಗಿರುವ ಯುವಕನಿಗೆ ಲಾಕ್ ಅಪ್ ನಲ್ಲಿ ಮನಸೋಇಚ್ಛೆ ಥಳಿಸಿ ಕೈ ಮುರಿಯಲಾಗಿದೆ ಎಂದು ಆತನ ಪರ ವಕೀಲರು ಆರೋಪಿಸಿದ್ದಾರೆ.

ಚೆನ್ನೈ: ರಾಷ್ಟ್ರಧ್ವವನ್ನು ಸುಟ್ಟ ಅರೋಪದಡಿ ಬಂಧನಕ್ಕೊಳಗಾಗಿರುವ ಯುವಕನಿಗೆ ಲಾಕ್ ಅಪ್ ನಲ್ಲಿ ಮನಸೋಇಚ್ಛೆ ಥಳಿಸಿ ಕೈ ಮುರಿಯಲಾಗಿದೆ ಎಂದು ಆತನ ಪರ ವಕೀಲರು ಆರೋಪಿಸಿದ್ದಾರೆ.  
ದಿಲೀಪನ್ ಮಹೇಂದ್ರನ್ ಪರ ವಾದ ಮಂಡಿಸುತ್ತಿರುವ ವಕೀಲ ವಿ.ಎಳಂಗೋವನ್ ಜೈಲ್ಲಿಗೆ ಭೇಟಿ ನೀಡಿದ ಬಳಿಕ ಈ ಆರೋಪ ಮಾಡಿದ್ದು, ತಮ್ಮ  ಕಕ್ಷಿದಾರನನ್ನು ನ್ಯಾಯಾಲಯದ ಎದುರು ಹಾಜರುಪಡಿಸುವುದಕ್ಕೂ ಮುನ್ನ ಆತನನ್ನು ಮನಬಂದಂತೆ ಥಳಿಸಲಾಗಿದ್ದು ಬಲಗೈ ಮೂಳೆಯನ್ನು ಮುರಿಯಲಾಗಿದೆ ಎಂದು ಆರೋಪಿಸಿದ್ದಾರೆ.  
"ಬಂಧನಕ್ಕೊಳಗಾದ 4 ದಿನಗಳ ನಂತರ ದಿಲೀಪನ್ ಮಹೇಂದ್ರನ್ ನನ್ನು ಭೇಟಿ ಮಾಡಿದ್ದೆ, ಈ ವೇಳೆ ಪೊಲೀಸರು ತನಗೆ ಥಳಿಸಿರುವ ಘಟನೆಯನ್ನು ವಿವಿರಿಸಿದ" ಎಂದು ಆರೋಪಿ ಪರ ವಕೀಲ ಎಳಂಗೋವನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೂಲತಃ ತಮಿಳುನಾಡು ಮೂಲದ ನಾಗಪಟ್ಟಣಂ ಮೂಲದ ದಿಲೀಪನ್ ಮಹೇಂದ್ರನ್ ಎಂಬ ಯುವಕ ತನ್ನ ಫೇಸ್ ಬುಕ್ ಖಾತೆಯಲ್ಲಿ ರಾಷ್ಟ್ರಧ್ವಜಕ್ಕೆ ಬೆಂಕಿ ಇಡುತ್ತಿರುವ ಫೊಟೋಗಳನ್ನು ಅಪ್ ಲೋಡ್  ಮಾಡಿದ್ದು ವೈರಲ್ ಆಗಿತ್ತು. ಬಂಧನದ ನಂತರ ಕೈ ಮುರಿದುಕೊಂಡು ನಿಂತಿರುವ ದಿಲೀಪನ್ ನರೇಂದ್ರನ್ ನ ಫೋಟೊ ವೈರಲ್ ಆಗಿದೆ.
ಕೈ ಮುರಿಯುವಂತೆ ಥಳಿಸಿರುವುದೂ ಅಲ್ಲದೇ ಪೊಲೀಸರು ಲಾಕ್ ಅಪ್ ನಲ್ಲಿ ಥಳಿಸಿದ್ದನ್ನು ನ್ಯಾಯಾಧೀಶರೆದುರು ಹೇಳಿದರೆ ಮತ್ತಷ್ಟು ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದೂ ದಿಲೀಪನ್ ಮಹೇಂದ್ರನ್ ಪರ ವಕೀಲರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ

T20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದ ವಿಶ್ವ ದಾಖಲೆ ಬರೆದ ಪಾಕ್ ಕ್ಯಾಪ್ಟನ್!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?