(ಸಾಂದರ್ಭಿಕ ಚಿತ್ರ) 
ದೇಶ

ರೈಲು ಪ್ರಯಾಣಿಕರಿಗೆ ಶೀಘ್ರದಲ್ಲೇ ಸಿಗಲಿದೆ 25 ರೀತಿಯ ಟೀ!

ಮಹಾಮನ ಎಕ್ಸ್ ಪ್ರೆಸ್ ಗೆ ಚಾಲನೆ ದೊರೆಯುತ್ತಿದ್ದಂತೆ ಭಾರತೀಯ ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇನ್ನು ಮಂದೆ ರೈಲುಗಳಲ್ಲಿ 25 ರೀತಿಯ ವಿಭಿನ್ನ ಟೀಗಳು ಲಭ್ಯವಾಗಲಿದೆ...

ನವದೆಹಲಿ: ಮಹಾಮನ ಎಕ್ಸ್ ಪ್ರೆಸ್ ಗೆ ಚಾಲನೆ ದೊರೆಯುತ್ತಿದ್ದಂತೆ ಭಾರತೀಯ ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು,  ಇನ್ನು ಮಂದೆ ರೈಲುಗಳಲ್ಲಿ 25 ರೀತಿಯ ವಿಭಿನ್ನ ಟೀಗಳು ಲಭ್ಯವಾಗಲಿದೆ.

ಪ್ರಯಾಣಿಕರ ಪ್ರಯಾಣ ಸುಖಕರವಾಗಿರಲೆಂದು ರೈಲ್ವೆ ಅಧಿಕಾರಿಗಳು ಇದೀಗ ಮೂರು ವಿಶೇಷ ಸೌಲಭ್ಯಗಳನ್ನು ಘೋಷಣೆ ಮಾಡಿದ್ದು, ಇನ್ನು ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ 25 ರೀತಿಯ ವಿಭನ್ನ ಟೀಗಳು ಸೇರಿದಂತೆ ಬೆಡ್ ಶೀಟ್, ತಲೆ ದಿಂಬು ಹಾಗೂ ರೈಲು ಪ್ರವೇಶಿಸುವ ನಿಲ್ದಾಣಗಳನ್ನು ಬದಲಾಯಿಸಿಕೊಳ್ಳುವ ಸೌಲಭ್ಯಗಳನ್ನು ನೀಡಿದೆ.

ರೈಲಿನಲ್ಲಿ ಕುಲ್ಹಾದ್ ಚಾಯ್, ಅದ್ರಾಕ್ ತುಳಸಿ ಚಾಯ್, ಹನಿ ಜೀಂಜರ್, ಲೆಮನ್ ಟೀಗಳನ್ನು ಹೊರತು ಪಡಿಸಿ ದೇಶಿ ಚಾಯ್, ಆಮ್ ಪಾಪಡ್ ಚಾಯ್‌, ಮಿರ್ಚಿ ಚಾಯ್ ಇನ್ನಿತರ ಟೀಗಳು ಲಭ್ಯವಾಗಲಿವೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಶನ್ 25 ವಿಭಿನ್ನ ಟೀಗಳನ್ನು ಪ್ರಯಾಣಿಕರಿಗೆ ಒದಗಿಸಲು ಯೋಜನೆ ರೂಪಿಸಿದೆ. IRCTCಯ ಆ್ಯಪ್‌ ಮೂಲಕ ಪ್ರಯಾಣಿಕರು ಟೀಗಳನ್ನು ಆರ್ಡರ್ ಮಾಡಬಹುದಾಗಿತೆ.

ಇನ್ನು ರೈಲಿನಲ್ಲಿ ನಿದ್ರಿಸುವ ಪ್ರಯಾಣಿಕರಿಗೆ ಅಧಿಕಾರಿಗಳು ವಿಶೇಷ ಸೌಲಭ್ಯವನ್ನು ಘೋಷಿಸಿದ್ದು, ಹಣವನ್ನು ನೀಡಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಪ್ರಸ್ತುತ ಈ ಸೌಲಭ್ಯವನ್ನು ಚೆನ್ನೈನ ತಂಬರಂ ನಿಲ್ದಾಣಕ್ಕೆ ಮಾತ್ರ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಸೌಲಭ್ಯವನ್ನು ಇನ್ನಿತರೆ ನಿಲ್ದಾಣಗಳಿಗೂ ವಿಸ್ತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಂತೆ ಬೋರ್ಡಿಂಗ್ ಬದಲಾವಣೆ ಸೌಲಭ್ಯವನ್ನು ನೀಡಲು ಘೋಷಣೆ ಮಾಡಿರುವ ಅಧಿಕಾರಿಗಳು ಇನ್ನುಮುಂದೆ ಪ್ರಯಾಣಿಕರು ತಮ್ಮ ರೈಲು ಪ್ರವೇಶಿಸುವ ನಿಲ್ದಾಣಗಳನ್ನು ಐಆರ್ ಸಿಟಿಸಿ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಬದಲಾಯಿಸಿಕೊಳ್ಳಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ