ಬಿಜೆಪಿ ವಕ್ತಾರ ನಳಿನ್ ಕೊಹ್ಲಿ
ನವದೆಹಲಿ: ಸರ್ಕಾರದ ಕ್ರಮ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲ್ಯದ (ಜೆಎನ್‌ಯು) ವಿರುದ್ಧವಲ್ಲ, ಉಗ್ರರೊಂದಿಗೆ ಕೈ ಜೊಡಿಸುವವರ ವಿರುದ್ಧ ಎಂದು ಭಾರತೀಯ ಜನತಾ ಪಕ್ಷ ಸೋಮವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಅವರು, ಜೆಎನ್‌ಯು ವಿವಾದ ಸಂಸ್ಥೆ ಕುರಿತಂತೆ, ಸಂಸ್ಥೆಯ ಮೇಲೆ ದಾಳಿ ಮಾಡಬೇಕೆಂಬುದು ಅಥವಾ ಅಲ್ಲಿ ಓದಬೇಕೆಂಬುದಲ್ಲ. ಭಾರತವನ್ನು ನಾಶ ಪಡಿಸುವ ಉದ್ದೇಶ ಇಲ್ಲಿ ಕಾಣುತ್ತಿದೆ. ಪ್ರತಿಭಟನೆ ಮಾಡುತ್ತಿರುವವರು ಬಹಿರಂಗವಾಗಿ ಉಗ್ರರೊಂದಿಗೆ ಕೈ ಜೋಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಫ್ಜಲ್ ಗುರು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಇದೀಗ ಗಲ್ಲು ಶಿಕ್ಷೆ ವಿರೋಧಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಇದರ ಅರ್ಥ ಸುಪ್ರೀಂಕೋರ್ಟ್ ತಪ್ಪು ಮಾಡಿದೆ ಎಂದು ಅರ್ಥವೇ? ಸಂವಿಧಾನದ ಅನ್ವಯ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಮತನಾಡುವುದಾದರೆ, ಸಮಂಜಸವಾದ ಕಟ್ಟುಪಾಡುಗಳಿಲ್ಲದೆಯೇ ಸಂವಿಧಾನವನ್ನು ವ್ಯಾಖ್ಯಾನಿಸುವುದು ಸರಿಯೇ? ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ತನಿಖೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರೂ ಕೈ ಜೋಡಿಸಬೇಕಿದ್ದು, ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ಹೇಳಿದ್ದಾರೆ.