ದೇಶ

ಜೆಎನ್ ಯು ವಿದ್ಯಾರ್ಥಿಗಳ ಮೇಲೆ ವಕೀಲರಿಂದ ಹಲ್ಲೆ: ಪ್ರಕರಣದ ತನಿಖೆಗೆ ಬಾರ್ ಕೌನ್ಸಿಲ್ ನಿಂದ ಸಮಿತಿ ರಚನೆ

Srinivas Rao BV

ನವದೆಹಲಿ: ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ಜೆಎನ್ ಯು ವಿವಿ ವಿದ್ಯಾರ್ಥಿಗಳ ಮೇಲೆ ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ವಕೀಲರ ಕೈವಾಡ ಇರುವುದರ ಬಗ್ಗೆ ತನಿಖೆ ನಡೆಸಲು ವಕೀಲರ ಮಂಡಳಿ (ಬಾರ್ ಕೌನ್ಸಿಲ್) ಸಮಿತಿ ರಚಿಸಿದೆ.
ಹೈಕೋರ್ಟ್ ಒಂದರ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಸಮಿತಿಯ ವಕೀಲರು ಹಲ್ಲೆ ನಡೆಸಿರುವುದರ ಬಗ್ಗೆ ತನಿಖೆ ನಡೆಸಲಿದ್ದು ಮೂರು ವಾರದೊಳಗೆ ತನಿಖಾ ವರದಿ ನೀಡುವಂತೆ ತ್ರಿಸದಸ್ಯ ಸಮಿತಿಗೆ ಸೂಚನೆ ನೀಡಲಾಗಿದೆ ಎಂದು ಬಾರ್ ಕೌನ್ಸಿಲ್ ನ ಅಧ್ಯಕ್ಷ ಮನನ್ ಕುಮಾರ್ ಹೇಳಿದ್ದಾರೆ.    
ದೇಶಧ್ರೋಹದ ಆರೋಪದಡಿ  ಫೆ.15 ರಂದು ಜೆಎನ್ ಯು ವಿವಿ ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹಯ್ಯ ಕುಮಾರ್ ನನ್ನು ಬಂಧನದ ವೇಳೆ ಕೆಲವು ವಕೀಲರು ಪತ್ರಕರ್ತರು ಹಾಗೂ ಜೆಎನ್ ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಫೆ.17 ರಂದು ಸಂಘಟನೆ ನಾಯಕ ಕನ್ಹಯ್ಯ ಕುಮಾರ್ ನನ್ನು ವಕೀಲರು ಥಳಿಸಿದ ಪ್ರಕರಣ ವರದಿಯಾಗಿತ್ತು. ವಕೀಲರು ಹಲ್ಲೆ ನಡೆಸಿರುವುದು ಸಾಬೀತಾದರೆ ಅವರ ಪರವಾನಗಿಯನ್ನು ರದ್ದುಗೊಳಿಸಲಾಗುವುದು, ಬಾರ್ ಕೌನ್ಸಿಲ್ ನಿಂದ ಅಂತಹ ವಕೀಲರ ಹೆಸರನ್ನು ಕೈಬಿದಾಲಾಗುವುದು ಎಂದು ಮನನ್ ಕುಮಾರ್ ತಿಳಿಸಿದ್ದಾರೆ.

SCROLL FOR NEXT