ದೇಶ

ಬರ ಪೀಡಿತ ಪ್ರದೇಶದತ್ತ ನಿರ್ಲಕ್ಷ್ಯ; ಪ್ರಶಸ್ತಿ ಹಿಂತಿರುಗಿಸಿದ ಮಹಾರಾಷ್ಟ್ರದ ರೈತರು

Rashmi Kasaragodu
ಮುಂಬೈ: ಕೇಂದ್ರ ಸರ್ಕಾರದ ನೀತಿಯನ್ನು ಪ್ರತಿಭಟಿಸಿ ಸಾಹಿತಿಗಳು, ಚಿಂತಕರು ಪ್ರಶಸ್ತಿ ವಾಪಸ್ ಮಾಡಿದ್ದನ್ನು ನೋಡಿದ್ದೇವೆ. ಇದೀಗ ಮಹಾರಾಷ್ಟ್ರದಲ್ಲಿ ಬರಪೀಡಿತ ಪ್ರದೇಶಗಳನ್ನು  ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ ಎಂದು ಪ್ರತಿಭಟಿಸಿ ಇಲ್ಲಿನ ರೈತರು ಪ್ರಶಸ್ತಿ ವಾಪಸ್ ಮಾಡುತ್ತಿದ್ದಾರೆ.
78ರ ಹರೆಯದ ನಾರಾಯಣ ಖಾಡ್ಕೆ ಎಂಬ ಹಿರಿಯ ರೈತರೊಬ್ಬರು 1983ರಲ್ಲಿ ತಮಗೆ ಲಭಿಸಿದ ಶೇಟಿ ನಿಶ್ತಾ ಎಂಬ ಪ್ರಶಸ್ತಿಯನ್ನು ವಾಪಸ್ ಮಾಡುವ ಮೂಲಕ ಈ ಚಳುವಳಿಗೆ ನಾಂದಿ ಹಾಡಿದ್ದಾರೆ. ಹೆಚ್ಚು ಉತ್ಪನ್ನಗಳನ್ನು ಸೃಷ್ಟಿಸಿದ ಉತ್ತಮ ಬೆಳೆಗಾರರಿಗೆ ನೀಡುವ ಪ್ರಶಸ್ತಿ ಇದಾಗಿದ್ದು, ಗವರ್ನರ್ ಖಾಡ್ಕೆ ಅವರಿದೆ ಈ ಪ್ರಶಸ್ತಿ ಪ್ರದಾನ ಮಾಡಿದ್ದರು.  
ಬಡಪೀಡಿತ ಪ್ರದೇಶಗಳತ್ತ ಸರ್ಕಾರದ ನಿರ್ಲಕ್ಷ್ಯ ಮತ್ತು ರೈತರ ಆತ್ಮಹತ್ಯೆಯನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟಿಸಿ ಖಾಡ್ಕೆ ಪ್ರಶಸ್ತಿ ವಾಪಸ್ ಮಾಡಿದ್ದಾರೆ.
ರೈತರಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಈ ಯೋಜನೆಗಳು ರೈತರಿಗೆ ತಲುಪಲೇ ಇಲ್ಲ. ಸರ್ಕಾರ ನಮ್ಮ ಸಮಸ್ಯೆಗಳ ಬಗ್ಗೆ ಕೇಳುತ್ತಿಲ್ಲ. ಬಡವನ ಸಮಸ್ಯೆಗಳನ್ನು ಯಾರೂ ಕೇಳುವುದಿಲ್ಲ, ಸಾಲದ ಹೊರೆ ಹೊತ್ತ ರೈತನ ಗೋಳನ್ನು ಯಾರೂ ಆಲಿಸುವುದಿಲ್ಲ ಎಂದು ಅರಿವಾಗಿದೆ. ಆದ ಕಾರಣ ನಾನು ಪ್ರಶಸ್ತಿ ವಾಪಸ್ ಮಾಡುತ್ತಿದ್ದೇನೆ ಎಂದು ಖಾಡ್ಕೆ ಹೇಳಿದ್ದಾರೆ.
ಅದೇ ವೇಳೆ ಲಾತೂರ್ ಜಿಲ್ಲೆಯ ಕಾರ್ಲಾ ಗ್ರಾಮದ ವಿಥಲ್ ರಾವ್ ಎಂಬ ರೈತ  ತಮಗೆ 2011ರಲ್ಲಿ ಲಭಿಸಿದ ಶೇಟಿ ನಿಶ್ತಾ ಪ್ರಶಸ್ತಿಯನ್ನು ವಾಪಸ್ ಮಾಡಿ ಅದರೊಂದಿಗೆ ಸಿಕ್ಕಿದ ರು. 10,000 ಚೆಕ್‌ನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಕಳುಹಿಸಿದ್ದಾರೆ.
SCROLL FOR NEXT