ಬಡತನ ಹಿಂಸೆಯ ಕೆಟ್ಟ ರೂಪ: ಪ್ರಣಬ್ ಮುಖರ್ಜಿ 
ದೇಶ

ಬಡತನ ಹಿಂಸೆಯ ಕೆಟ್ಟ ರೂಪ: ಪ್ರಣಬ್ ಮುಖರ್ಜಿ

ಬಹು ನಿರೀಕ್ಷಿತ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದ್ದು, ಬಡತನ ಹಿಂಸೆಯ ಕೆಟ್ಟ ರೂಪವಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಂಗಳವಾರ ಹೇಳಿದ್ದಾರೆ...

ನವದೆಹಲಿ: ಬಹು ನಿರೀಕ್ಷಿತ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದ್ದು, ಬಡತನ ಹಿಂಸೆಯ ಕೆಟ್ಟ ರೂಪವಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಂಗಳವಾರ ಹೇಳಿದ್ದಾರೆ. 
ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಜಂಟಿ ಅಧಿವೇಶನ ಕುರಿತು ಮಾತನಾಡಿದ ಅವರು, ತಮ್ಮ ಸರ್ಕಾರ ಆಡಳಿತದ ಕುರಿತಂತೆ ಮಾತನಾಡಿದರು. ದೇಶದಲ್ಲಿ ಬಡತನ ಎಂಬುದು ಹಿಂಸೆಯ ಕೆಟ್ಟರೂಪವನ್ನು ಪಡೆದುಕೊಂಡಿದೆ. ಇಂತಹ ಬಡತನವನ್ನು ನಿರ್ಮೂಲನ ಮಾಡಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಗಮನ ಹರಿಸುತ್ತಿದೆ. ಕಡು ಬಡತನ ಜನರಿಗೆ ಸಾಮಾಜಿಕ ಭಧ್ರತೆ ಹಾಗೂ ಆರ್ಥಿಕ ಸೌಲಭ್ಯವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ. 
ನಮ್ಮ ಸರ್ಕಾರ ಇಂದು ಗರಿಬೋಂಕಿ ಉನ್ನತಿ (ಬಡಜನರ ಪ್ರಗತಿ), ಕಿಸಾನೋಂಕಿ ಸಮೃದ್ಧಿ (ರೈತರ ಏಳಿಗೆ) ಮತ್ತು ಯುವಕೊಂಕ ರೋಜ್ಗಾರ್ (ಯುವಜನರಿಗೆ ಉದ್ಯೋಗ) ನೀಡುವತ್ತ ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ ನಮ್ಮ ಸರ್ಕಾರ 3 ಹೊಸ ಯೋಜನೆಗಳಾದ ಸಾಮಾಜಿಕ ಭದ್ರತೆ, ಪಿಂಚಣಿ ಯೋಜನೆ ಹಾಗೂ 2022ರ ವೇಳೆ ಎಲ್ಲರಿಗೂ ವಸತಿ ನೀಡುವುದನ್ನು ಜಾರಿಗೆ ತರುತ್ತಿದೆ.
ನಂತರ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪ್ರತಿ ಅಧಿವೇಶನದಲ್ಲೂ ವಿಮರ್ಶೆ, ಟೀಕೆಗಳು ಇದ್ದೇ ಇರುತ್ತದೆ. ಈ ಬಜೆಟ್ ಅಧಿವೇಶನ ಸಫಲತೆಯನ್ನು ಕಾಣಲಿ ಎಂದು ಆಶಿಸುತ್ತೇನೆ. ಅಧಿವೇಶನದಲ್ಲಿ ಕೆಲವು ವಿಷಯಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯಲಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ