ವಿಜಯವಾಡ: ಮತ್ತೊಬ್ಬ ವೈಎಸ್ ಆರ್ ಕಾಂಗ್ರೆಸ್ ಶಾಸಕರೊಬ್ಬರು ಬುಧವಾರ ಆಡಳಿತರೂಢ ತೆಲುಗು ದೇಶಂ ಪಕ್ಷ ಸೇರ್ಪಡೆಯಾಗಿದ್ದಾರೆ.
ಕಡಪ ಜಿಲ್ಲೆಯ ಬಡ್ವೆಲ್ ವಿಧಾಸಭಾ ಕ್ಷೇತ್ರದ ಶಾಸಕ ಟಿ.ಜಯರಾಮುಲು ಅವರು ಇಂದು ಟಿಡಿಪಿ ಸೇರ್ಪಡೆಯಾದರು. ಕಳೆದ ಐದು ದಿನಗಳಲ್ಲಿ ಕಡಪ ಜಿಲ್ಲೆಯಿಂದ ವೈಎಸ್ ಆರ್ ಕಾಂಗ್ರೆಸ್ ತೊರೆದು ಡಿಟಿಪಿ ಸೇರ್ಪಡೆಯಾಗುತ್ತಿರುವ ಎರಡನೇ ಶಾಸಕರಾಗಿದ್ದಾರೆ.
ವಿಜಯವಾಡದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ಜಯರಾಮುಲು ಅವರು ಟಿಡಿಪಿಗೆ ಸೇರ್ಪಡೆಯಾದರು.
ಒಂದೇ ವಾರದಲ್ಲಿ ಆಡಳಿತರೂಢ ಡಿಟಿಪಿ ಕಂಟಕವಾಗಿದ್ದ ವೈಎಸ್ಆರ್ ಕಾಂಗ್ರೆಸ್ ನ ಇಬ್ಬರು ಶಾಸಕರು ಪಕ್ಷ ತೊರೆದಿರುವುದು ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗಮೋಹನ್ ರೆಡ್ಡಿ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.