ಜೆಎನ್ ಯು ವಿವಾದ: ಕಾಶ್ಮೀರದಲ್ಲಿ ಕನ್ಹಯ್ಯಗೆ ಬೆಂಬಲ ಸೂಚಿಸಿ ಪ್ರತಿಭಟನೆ
ಶ್ರೀನಗರ: ಜೆಎನ್ ಯು ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಇದೀಗ ಈ ವಿವಾದದ ಬೆಂಕಿ ಕಾಶ್ಮೀರದ ವಿವಿಯಲ್ಲೂ ಉರಿಯಲು ಆರಂಭಿಸಿದೆ.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ರಾಷ್ಟ್ರದ್ರೋಹ ಪ್ರಕರಣ ಎದುರಿಸುತ್ತಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಗೆ ಇದೀಗ ಕಾಶ್ಮೀರ ವಿವಿ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದ್ದು, ಜೆಎನ್ ಯು ವಿದ್ಯಾರ್ಥಿಗಳ ಪರವಾಗಿ ಸಹಿ ಸಂಗ್ರಹ ಚಳುವಳಿಯನ್ನು ಆರಂಭಿಸಿದ್ದಾರೆ. ಅಲ್ಲದೆ, ಪ್ರತಿಭಟನೆಗಳನ್ನು ನಡೆದಿದ್ದಾರೆ.
ನಮಗೆ ಸ್ವಾತಂತ್ರ್ಯ ಬೇಕು. ನೀವು ಎಷ್ಟು ಕನ್ಹಯ್ಯರನ್ನು ಬಂಧಿಸುತ್ತೀರಿ. ಕನ್ಹಯ್ಯಾ ಕುಮಾರ್ ರನ್ನು ಬಂಧಿಸಿದರೆ ಪ್ರತಿ ಮನೆಯಿಂದಲೂ ಕನ್ಹಯ್ಯಾ ಎದ್ದು ಬರುತ್ತಾನೆಂದು ಘೋಷಣೆಗಳನ್ನು ಕೂಗಿದ್ದಾರೆ.
ಇದರಂತೆ ಜೆಎನ್ ಯು ವಿವಾದಕ್ಕೆ ಸಂಬಂಧಿದಂತೆ ವಿವಿ ಆಂತರಿಕ ತನಿಖಾ ಸಮಿತಿ ಸಂಗ್ರಹಿಸಿದ ಸಾಕ್ಷಿಗಳನ್ನಾಧರಿಸಿ ದೆಹಲಿ ಪೊಲೀಸರು ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿದ್ದಾರೆ. ವರದಿಯಲ್ಲಿ ಕನ್ಹಯ್ಯಾ ಸೇರಿ ಎಂಟು ವಿದ್ಯಾರ್ಥಿಗಳು ಅಸಾಂವಿಧಾನಿಕ ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics