ದೇಶ

ದುರ್ಗೆ ಬಗ್ಗೆ ಒಂದು ಪದವನ್ನು ಮಾತನಾಡಿಲ್ಲ; ಸೀತಾರಾಮ್ ಯೆಚೂರಿ

Manjula VN

ನವದೆಹಲಿ: ರಾಜ್ಯಸಭೆಯಲ್ಲಿ ನಾನು ದುರ್ಗೆ ಬಗ್ಗೆ ಮಾತನಾಡಿಲ್ಲ. ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ಅಸಂಬದ್ಧವಾದದ್ದು ಎಂದು ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಅವರು ಹೇಳಿದ್ದಾರೆ.

ಸೀತಾರಾಮ್ ಯೆಚೂರಿಯವರು ಈ ಹಿಂದೆ ರಾಜ್ಯಸಭೆಯಲ್ಲಿ ದುರ್ಗೆಗೆ ವಿರುದ್ಧವಾಗಿ ಮಾತನಾಡಿದ್ದಾರೆಂದು ಹೇಳಿ ಹಲವು ಬೆದರಿಕೆ ಕರೆಗಳು ಬಂದಿರುವುದಾಗಿ ಹೇಳಲಾಗುತ್ತಿತ್ತು. ಇದೀಗ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪ ಹಾಗೂ ಬೆದರಿಕೆ ಕರೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನನಗೆ ಹಲವು ಬೆದರಿಕೆ ಕರೆ ಹಾಗೂ ಬೆದರಿಕೆ ಸಂದೇಶಗಳು ಬರುತ್ತಿವೆ. ರಾಜ್ಯಸಭೆಯಲ್ಲಿ ನಾನು ದುರ್ಗೆ ಬಗ್ಗೆ ಮಾತನಾಡಿಲ್ಲ. ಇದು ನಿಜಕ್ಕೂ ಅಸಂಬದ್ಧವಾದದ್ದು. ದುರ್ಗೆ ಹೆಸರು ಕೂಡ ನನ್ನ ಬಾಯಲ್ಲಿ ಬರಲಿಲ್ಲ. ಬೇಕಿದ್ದರೆ ಯೂಟ್ಯೂಬ್ ನಲ್ಲಿ ನನ್ನ ಹೇಳಿಕೆಗಳಿವೆ ನೋಡಿ. ನನ್ನ ವಿರುದ್ಧ ಅಪಪ್ರಚಾರ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಈ ವರೆಗೂ 1000ಕ್ಕೂ ಹೆಚ್ಚು ಕರೆಗಳು ಹಾಗೂ 500 ಕ್ಕೂ ಹೆಚ್ಚು ಸಂದೇಶಗಳು ನನ್ನ ಮೊಬೈಲ್ ಸಂಖ್ಯೆಗೆ ಬಂದಿವೆ. ಈ ರೀತಿಯಾಗಿ ಬೆದರಿಕೆ ಹಾಕಿದರೆ ಯಾವುದೇ ಪ್ರಯೋಜನವಿಲ್ಲ. ಪೊಲೀಸರಿಗೆ ಈಗಾಗಲೇ ನಮ್ಮ ಕಚೇರಿ ದೂರು ನೀಡಿದ್ದು, ಬೆದರಿಕೆ ಕರೆ ಬಂದ ಸಂಖ್ಯೆಗಳು ಹಾಗೂ ಸಂದೇಶ ಬಂದ ಸಂಖ್ಯೆಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

SCROLL FOR NEXT