ದೇಶ

ಸ್ನೇಹ ಸೂಚಕವಾಗಿ ಉದ್ಧವ್ ಠಾಕ್ರೆಗೆ ಹುಲಿಯ ಪ್ರತಿಕೃತಿ ನೀಡಲಿರುವ ಬಿಜೆಪಿ

ಶಿವಸೇನೆ- ಬಿಜೆಪಿ ನಡುವೆ ಉಂಟಾಗಿರುವ ಬಿರುಕನ್ನು ದೂರ ಮಾಡುವ ನಿಟ್ಟಿನಲ್ಲಿ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಗೆ ಹುಲಿಯ ಪ್ರತಿಕೃತಿ ನೀಡಲು ಬಿಜೆಪಿ ನಿರ್ಧರಿಸಿದೆ.

ಮುಂಬೈ: ಶಿವಸೇನೆ- ಬಿಜೆಪಿ ನಡುವೆ ಉಂಟಾಗಿರುವ ಬಿರುಕನ್ನು ದೂರ ಮಾಡುವ ನಿಟ್ಟಿನಲ್ಲಿ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಗೆ ಹುಲಿಯ ಪ್ರತಿಕೃತಿ ನೀಡಲು ಬಿಜೆಪಿ ನಿರ್ಧರಿಸಿದೆ.
ಹುಲಿ ಶಿವಸೇನೆಯ ಚಿಹ್ನೆಯೂ ಆಗಿದ್ದು, ಉದ್ಧವ್ ಠಾಕ್ರೆ ಅವರಿಗೆ ನೆಚ್ಚಿನ ಪ್ರಾಣಿಯೂ ಆಗಿದೆ. ಮುಂದಿನ ವಾರ ಮಹಾರಾಷ್ಟ್ರದ ಅರಣ್ಯ ಇಲಾಖೆಯ ಸಚಿವರಾದ ಸುಧೀರ್ ಮುಂಗಂತಿವರ್‍ ಉದ್ಧವ್ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಲಿದ್ದು ಉದ್ಧವ್ ಠಾಕ್ರೆಗೆ ಉಡುಗೊರೆಯನ್ನು ನೀಡಲಿದ್ದಾರೆ.
ಉದ್ಧವ್ ಠಾಕ್ರೆ ಅವರಿಗೆ ಹುಲಿಯ ಪ್ರತಿಕೃತಿಯನ್ನು ನೀಡುತ್ತಿರುವುದನ್ನು ಖಚಿತಪಡಿಸಿರುವ ಸುಧೀರ್ ಮುಂಗಂತಿವರ್‍, ಇದೊಂದು ಸ್ನೇಹ ಸೂಚಕ ಉಡುಗೊರೆಯಷ್ಟೆ ಇದಕ್ಕೆ ರಾಜಕೀಯ ಅರ್ಥಗಳನ್ನು ಕಲ್ಪಿಸಬೇಡಿ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಮುಖಂಡರೊಬ್ಬರು, ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಅದರ ನಿಲುವು ಬದಲಿಸಿಕೊಳ್ಳಬೇಕು, ಬಿಜೆಪಿಯೊಂದಿಗೆ ಉದ್ಧವ್ ಠಾಕ್ರೆ ಸೈದ್ಧಾಂತಿಕ ವೈರತ್ವ ಹೊಂದಿಲ್ಲ. ಕೆಲವು ವಿಷಯಗಳಲ್ಲಿ ಬಿಜೆಪಿಯ ನಿಲುವುಗಳನ್ನು ಪ್ರಶ್ನೆ ಮಾಡುತ್ತಾರಷ್ಟೆ. ಅದನ್ನು ಬಿಜೆಪಿ ಸರಿಪಡಿಸಿಕೊಂಡರೆ ಯಾವುದೇ ಉಡುಗೊರೆ ಇಲ್ಲದೇ ಉದ್ಧವ್ ಠಾಕ್ರೆ ಸಂತಸಗೊಳ್ಳುತ್ತಾರೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಯಕತ್ವ ಹಗ್ಗಜಗ್ಗಾಟ ನಡುವೆ ಗುಪ್ತಚರ ಮುಖ್ಯಸ್ಥರ ಬದಲಾವಣೆ: ಅಧಿಕಾರ ಇನ್ನೂ ನನ್ನ ಕೈಯಲ್ಲೇ ಇದೆ, ಕಠಿಣ ಸಂದೇಶ ರವಾನಿಸಿದ ಸಿದ್ದರಾಮಯ್ಯ..?

ಗಾಯದ ಮೇಲೆ ಬರೆ: ವಾಣಿಜ್ಯ LPG ಸಿಲಿಂಡರ್ ದರ ರೂ.993 ಏರಿಕೆ, ಹೊಸ ದರ ಇಂದಿನಿಂದ ಜಾರಿ..!

ಬಿಜೆಪಿಯಿಂದ ಹಣ ಪಡೆದು Exit polls ಪ್ರಕಟ: 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ TMC ಗೆಲುತ್ತೆ- ಮಮತಾ ಬ್ಯಾನರ್ಜಿ!

IPL 2026: RCB ಬ್ಯಾಟಿಂಗ್ ವೈಫಲ್ಯ, 4 ವಿಕೆಟ್ ಗಳಿಂದ ಗೆದ್ದ ಗುಜರಾತ್ ಟೈಟನ್ಸ್!

ಭಬಾನಿಪುರದ ಸ್ಟ್ರಾಂಗ್ ರೂಮ್‌ಗೆ ದೌಡಾಯಿಸಿದ ಮಮತಾ ಬ್ಯಾನರ್ಜಿ! EVM ಟ್ಯಾಂಪರಿಂಗ್ ಆರೋಪ

SCROLL FOR NEXT