ಮಧುರೈ ಮೀನಾಕ್ಷಿ ದೇಗುಲದ ಬಳಿ ಪೆಟ್ರೋಲ್ ಬಾಂಬ್ ಸ್ಪೋಟ 
ದೇಶ

ಮಧುರೈ ಮೀನಾಕ್ಷಿ ದೇಗುಲದ ಬಳಿ ಪೆಟ್ರೋಲ್ ಬಾಂಬ್ ಸ್ಪೋಟ

ದಕ್ಷಿಣ ಭಾರತದ ಖ್ಯಾತ ದೇವಾಲಯಗಳಲ್ಲಿ ಒಂದಾಗಿರುವ ಮಧುರೈ ಮೀನಾಕ್ಷಿ ದೇವಾಲಯದ ಬಳಿ ಪೆಟ್ರೋಲ್ ಬಾಂಬ್'ವೊಂದು ಸ್ಪೋಟಗೊಂಡಿರುವುದಾಗಿ ತಿಳಿದುಬಂದಿದೆ...

ಮಧುರೈ: ದಕ್ಷಿಣ ಭಾರತದ ಖ್ಯಾತ ದೇವಾಲಯಗಳಲ್ಲಿ ಒಂದಾಗಿರುವ ಮಧುರೈ ಮೀನಾಕ್ಷಿ ದೇವಾಲಯದ ಬಳಿ ಪೆಟ್ರೋಲ್ ಬಾಂಬ್'ವೊಂದು ಸ್ಪೋಟಗೊಂಡಿರುವುದಾಗಿ ತಿಳಿದುಬಂದಿದೆ.

ಕಳೆದ ರಾತ್ರಿ ದುಷ್ಕರ್ಮಿಗಳು ದೇವಾಲಯದ ಬಳಿ ಮೂರು ಪೆಟ್ರೋಲ್ ಬಾಂಬ್ ಗಳನ್ನು ಎಸೆದು ಪರಾರಿಯಾಗಿದ್ದು, ಮೂರು ಬಾಂಬ್ ಗಳಲ್ಲಿ ಒಂದು ಪೆಟ್ರೋಲ್ ಬಾಂಬ್ ಸ್ಪೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

ಬಾಂಬ್ ಸ್ಫೋಟಗೊಂಡ ನಂತರ ದೇವಾಲಯದ ಸುತ್ತುಮತ್ತ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತದನಂತರ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸ್ಪೋಟಕ್ಕೆ ಪೆಟ್ರೋಲ್ ಬಾಂಬ್ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಇನ್ನು ಎರಡು ಪೆಟ್ರೋಲ್ ಬಾಂಬ್ ಗಳು ದೊರಕಿದ್ದು, ಅಧಿಕಾರಿಗಳು ಇದೀಗ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ದೇವಾಲಯದ ಸುತ್ತಮುತ್ತ ಹೆಚ್ಚಿನ ಭದ್ರತೆಯನ್ನು ನಿಯೋಜಿಸಿದ್ದಾರೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಅಪರಿಚಿತ ವ್ಯಕ್ತಿಗಳು ಕಳೆದ ರಾತ್ರಿ 2ಗಂಟೆ ಸುಮಾರಿಗೆ ದೇವಾಲಯದ ಬಳಿ ಮೂರು ಪೆಟ್ರೋಲ್ ಬಾಂಬ್ ಗಳನ್ನು ಎಸೆದು ಪರಾರಿಯಾಗಿದ್ದಾರೆ. ಇದರಲ್ಲಿ ಒಂದು ಬಾಂಬ್ ಮಾತ್ರ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ 927 ಕೋಟಿ ವಂಚನೆ ಆರೋಪ: ಓಜೋನ್ ಅರ್ಬಾನಾ CMD ವಾಸುದೇವನ್ ಬಂಧನ!

Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ, 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

‘CEC ಜ್ಞಾನೇಶ್ ಕುಮಾರ್ ದೇಶದ್ರೋಹಿ’: ಮುಂಬೈನಲ್ಲಿ ಭುಗಿಲೆದ್ದ Cockroach Janata Party ಪ್ರತಿಭಟನೆ, ರಾಜೀನಾಮೆಗೆ ಬಿಗಿಪಟ್ಟು..!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!