ಶ್ರೀ ರಾಮ (ಸಂಗ್ರಹ ಚಿತ್ರ) 
ದೇಶ

ರಾಮನ ಹೆಸರಲ್ಲಿ ಅದ್ಭುತ ಶಕ್ತಿ ಇದೆ: ಮುಸ್ಲಿಂ ಯುವಕರು

ಆಯೋಧ್ಯೆಯಲ್ಲಿ ರಾಮ ಮಂದಿರ ವಿಚಾರವಾಗಿ ಪರ ವಿರೋಧ ಹೇಳಿಕೆಗಳು ಕೇಳುತ್ತಿರುತ್ತವೆ. ಆದರೆ ರಾಮ್ ನಾಮ್ ಮೇ ಶಕ್ತಿ ಹೈ ಎಂದು ಉತ್ತರಪ್ರದೇಶದ ಕೆಲ ಮುಸ್ಲಿಂ...

ಅಲಹಾಬಾದ್: ಆಯೋಧ್ಯೆಯಲ್ಲಿ ರಾಮ ಮಂದಿರ ವಿಚಾರವಾಗಿ ಪರ ವಿರೋಧ ಹೇಳಿಕೆಗಳು ಕೇಳುತ್ತಿರುತ್ತವೆ. ಆದರೆ ರಾಮ್ ನಾಮ್ ಮೇ ಶಕ್ತಿ ಹೈ ಎಂದು ಉತ್ತರಪ್ರದೇಶದ ಕೆಲ ಮುಸ್ಲಿಂ ಹುಡುಗರು ಹೇಳಿದ್ದಾರೆ.

ರಾಮನ ಹೆಸರನ್ನು ಬರೆಯುವುದರಿಂದ ತಮಗೆ ಆಂತರಿಕ ಶಕ್ತಿ ಮತ್ತು ಉತ್ಸಾಹ ಸಿಗುತ್ತಿದೆ ಎಂದು ಅಲಹಾಬಾದ್ ನ ಫೈಸಲ್ ಖಾನ್ ಹಾಗೂ ಆತನ ಮುಸ್ಲಿಂ ಗೆಳೆಯರು ಹೇಳುತ್ತಾರೆ. ಈ ಹುಡುಗರು ಕಳೆದ ಹಲವು ವರ್ಷಗಳಿಂದ ಶ್ರೀರಾಮನ ಹೆಸರನ್ನು ಕಾಗದದಲ್ಲಿ ಬರೆಯುತ್ತಾ ಬಂದಿದ್ದಾರೆ. ರಾಮನ ಹೆಸರು ಬರೆದ ಹಾಳೆಗಳನ್ನು ಇವರು ಪ್ರತೀ ವರ್ಷವೂ ಮಾಘ ಮೇಳದಲ್ಲಿ ಸಮರ್ಪಿಸುತ್ತಾ ಬಂದಿದ್ದಾರೆ.

ರಾಮನ ಹೆಸರನ್ನು ನಿತ್ಯ ಬರೆಯುವುದನ್ನು ಇವರು ಮರೆಯುವುದೇ ಇಲ್ಲ. ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಇವರು ಕಳೆದ ಎಂಟು ವರ್ಷಗಳಿಂದ ರಾಮನ ಹೆಸರು ಬರೆಯುತ್ತಿದ್ದಾರೆ. ತಮ್ಮ ಮಾನಸಿಕ ಸ್ವಾಸ್ಥ್ಯ, ಏಕಾಗ್ರತೆ ಗಮನಾರ್ಹ ರೀತಿಯಲ್ಲಿ ಹೆಚ್ಚಾಗಿದೆ ಎಂದು ಈ ಹುಡುಗರು ಅಭಿಪ್ರಾಯಪಡುತ್ತಾರೆ.

ಈ ಮುಸ್ಲಿಮ್ ಹುಡುಗರು ತಮ್ಮ ಧರ್ಮ ಬಿಟ್ಟು ರಾಮನ ಹೆಸರು ಹಿಡಿದಿಲ್ಲ. ಪ್ರತೀ ದಿನವೂ ನಮಾಜ್ ಮಾಡುವುದನ್ನು ತಪ್ಪಿಸುವುದಿಲ್ಲ. ಇವರಿಗೆ ಕುರಾನ್'ನಷ್ಟೇ ಭಗವದ್ಗೀತೆ ಬಗ್ಗೆಯೂ ಜ್ಞಾನವಿದೆ. ಗೀತೆಯ ಅನೇಕ ಶ್ಲೋಕಗಳು ಇವರಿಗೆ ಕಂಠಪಾಠವಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ