ಮದರಸಾ 
ದೇಶ

ಮದರಸಾಗಳಲ್ಲಿ ಉರ್ದು, ಅರೇಬಿಕ್ ಕಲಿಕೆ ನಿಷೇಧಿಸಿ : ಪ್ರಧಾನಿ ಮೋದಿಗೆ ಶಿವಸೇನೆ ಸಲಹೆ

ಉರ್ದು, ಅರೇಬಿಕ್ ಭಾಷೆಯ ಬದಲಾಗಿ ಇಂಗ್ಲೀಷ್ ಅಥವಾ ಹಿಂದಿಯನ್ನು ಭಾರತದಲ್ಲಿರುವ ಮದರಸಾಗಳ ಕಲಿಕಾ ಮಾಧ್ಯಮದ ಭಾಷೆಯನ್ನಾಗಿಸಬೇಕು

ಮುಂಬೈ: ಗುಣಮಟ್ಟದ ಇಂಗ್ಲೀಷ್ ಕಲಿಯಿರಿ ಇಲ್ಲವೇ ಗಡಿಪಾರಾಗಲು ಸಿದ್ಧರಾಗಿ ಎಂದು ಮುಸ್ಲಿಂ ಮಹಿಳೆಯರಿಗೆ ಬ್ರಿಟನ್ ಸರ್ಕಾರ ನೀಡಿರುವ ಆದೇಶವನ್ನು ಗಮನಿಸಿ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲೂ ಅಂತಹದ್ದೇ ವ್ಯವಸ್ಥೆ ಜಾರಿಗೆ ತರಬೇಕು ಎಂದು ಶಿವಸೇನೆ ಒತ್ತಾಯಿಸಿದೆ.
ಉರ್ದು, ಅರೇಬಿಕ್ ಭಾಷೆಯ ಬದಲಾಗಿ ಇಂಗ್ಲೀಷ್ ಅಥವಾ ಹಿಂದಿಯನ್ನು ಭಾರತದಲ್ಲಿರುವ ಮದರಸಾಗಳ ಕಲಿಕಾ ಮಾಧ್ಯಮದ ಭಾಷೆಯನ್ನಾಗಿಸಬೇಕು, ಕೇಂದ್ರ ಸರ್ಕಾರ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಶಿವಸೇನೆ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದೆ.
ಕಳಪೆ ಇಂಗ್ಲೀಷ್ ಜ್ಞಾನವನ್ನು ಹೊಂದಿರುವ ಮಹಿಳೆಯರನ್ನು ಇಸ್ಲಾಮಿಕ್ ಸ್ಟೇಟ್ ನಂತಹ ಉಗ್ರ ಸಂಘಟನೆಗಳು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಬ್ರಿಟನ್ ಸರ್ಕಾರದ ವಾದ ಸರಿಯಾಗಿಯೇ ಇದೆ. ಈ ವಿಷಯದಲ್ಲಿ  ಪ್ರಧಾನಿ ಮೋದಿ ಅವರೂ ಬ್ರಿಟನ್ ಸರ್ಕಾರದ ಕ್ರಮಗಳನ್ನು ಮಾದರಿಯಾಗಿ ಪರಿಗಣಿಸಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ. 
ಬ್ರಿಟನ್ ಪ್ರಧಾನಿಯಂತೆ ಭಾರತ ಸರ್ಕಾರವೂ ಧೈರ್ಯ ತೋರಿಸಿ, ಮದರಸಾಗಳಲ್ಲಿ ಉರ್ದು, ಅರೇಬಿಕ್ ಕಲಿಕೆಯನ್ನು ನಿಲ್ಲಿಸಿ, ಇಂಗ್ಲೀಷ್, ಹಿಂದಿ ಭಾಷೆಗಳ ಮೂಲಕ ಕಲಿಕೆ ಪ್ರಾರಂಭಿಸಿದರೆ ಭಾರತಕ್ಕೆ ಅದರಿಂದ ಪ್ರಯೋಜನವಾಗಲಿದೆ ಎಂದು ಶಿವಸೇನೆ ಹೇಳಿದೆ.
ನಮ್ಮ ಪ್ರಧಾನಿ, ಸಚಿವರು ಕೈಗಾರಿಕೆ ಅಭಿವೃದ್ಧಿ, ಹೂಡಿಕೆ, ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ವಿದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಈ ಎಲ್ಲಾ ವಿಷಯಗಳಲ್ಲೂ ಭಾರತ ಕ್ರಮೇಣ ಯಶಸ್ಸು ಸಾಧಿಸುತ್ತದೆ. ಆದರೆ ಇಸ್ಲಾಮಿಕ್ ಉಗ್ರವಾದವನ್ನು ಮಟ್ಟ ಹಾಕುವುದಕ್ಕೆ ವಿದೇಶಗಳ ಕ್ರಮಗಳನ್ನು ನಾವು ಮಾದರಿಯಾಗಿ ಪಡೆಯದೇ ಇದ್ದರೆ ನಮಗೆ ಧೈರ್ಯ ಬರುವುದಾದರೂ ಎಲ್ಲಿಂದ ಎಂದು ಶಿವಸೇನೆ ಪ್ರಶ್ನಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bihar trends- ಬಿಹಾರ ಮತ ಎಣಿಕೆ ಪ್ರಗತಿಯಲ್ಲಿ, ಆರಂಭಿಕ ಟ್ರೆಂಡ್ ನಲ್ಲಿ NDA ಮುನ್ನಡೆ, ಮಹಾಘಟಬಂಧನ್ ಹಿನ್ನಡೆ

Bihar Election Results 2025: ಮತ ಎಣಿಕೆ ಆರಂಭ, ಸತತ 5ನೇ ಬಾರಿ ಗೆಲುವಿನ ಉತ್ಸಾಹದಲ್ಲಿ ನಿತೀಶ್ ಕುಮಾರ್, ಬದಲಾವಣೆ ನಿರೀಕ್ಷೆಯಲ್ಲಿ ತೇಜಸ್ವಿ ಯಾದವ್

Bihar Election Results 2025: ಇಂದು ಬಿಹಾರ ಚುನಾವಣೆ ಮತ ಎಣಿಕೆ, ಕೆಲವೇ ಹೊತ್ತಿನಲ್ಲಿ ಭವಿಷ್ಯ ನಿರ್ಧಾರ; ಗೆಲುವಿನ 'ಹಾರ' ಯಾರ ಪಾಲು?

'ನಮಗೆ ಆತುರವಿಲ್ಲ, ಪಕ್ಷ ಕಟ್ಟಲು ರಕ್ತ -ಬೆವರು ಸುರಿಸಿದ್ದೇವೆ: ಅಧಿಕಾರಕ್ಕಾಗಿ ಇನ್ನೂ 5 ವರ್ಷ ಕಾಯುತ್ತೇವೆ; ಸಮ್ಮಿಶ್ರ ಸರ್ಕಾರ ಸೇರುವ ಪ್ರಶ್ನೆಯೇ ಇಲ್ಲ'

Delhi blast: 12 ಜನರ ಸಾವಿಗೆ ಕಾರಣವಾದ ಪುಲ್ವಾಮಾದ ಶಂಕಿತ ಆರೋಪಿ ಡಾ. ಉಮರ್ ನಬಿ ಮನೆ ಧ್ವಂಸ

SCROLL FOR NEXT