ನೇತಾಜಿ ಸುಭಾಷ್ ಚಂದ್ರ ಬೋಸ್ 
ದೇಶ

ನೇತಾಜಿ ಮೊಮ್ಮಗ ಬಿಜೆಪಿ ಸೇರ್ಪಡೆ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಬೋಸ್ ಅವರು ಸೋಮವಾರ ಬಿಜೆಪಿಗೆ...

ಹೌರಾ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಬೋಸ್ ಅವರು ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಕೊಲ್ಕಾತದ ಹೌರಾ ಜಿಲ್ಲೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಚಂದ್ರ ಬೋಸ್ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ನೇತಾಜಿಗೆ ಸಂಬಂಧಪಟ್ಟ ದಾಖಲೆಗಳನ್ನು ಕೇಂದ್ರ ಸರ್ಕಾರ ಬಹಿರಂಗ ಪಡಿಸಿದ ಬೆನ್ನಲ್ಲೇ ಅವರ ಸೋದರ ಸಂಬಂಧಿ ಮೊಮ್ಮಗ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ನೇತಾಜಿ ಬದುಕಿಗೆ ಸಂಬಂಧಿಸಿದಂತೆ ಮಾಹಿತಿ ಬಹಿರಂಗ ಪಡಿಸಲು ಯಾವುದೇ ಸರ್ಕಾರ ಮುಂದೆ ಬಂದಿರಲಿಲ್ಲ. ಆದರೆ, ಬಿಜೆಪಿ ಅಂತಹ ಕಾರ್ಯ ಮಾಡಿದೆ. ಹಾಗಾಗಿ, ನಾನು ಬಿಜೆಪಿಯನ್ನು ಬೆಂಬಲಿಸುತ್ತೇನೆ ಎಂದು ಚಂದ್ರ ಬೋಸ್ ಹೇಳಿದ್ದಾರೆ. 
ಸ್ವಾತಂತ್ರ್ಯ ಹೋರಾಟಗಾರರ ಸಿದ್ಧಾಂತವನ್ನು ಒರೆಸು ಹಾಕುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಚಂದ್ರ ಬೋಸ್ ಅವರು ಚುನಾವಣೆ ವೇಳೆ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಚಾರ ಮಾಡಲಿದ್ದಾರೆ ಎಂದು ವರದಿಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಹಿರಂಗವಾಗಿ ರಾಜಿನಾಮೆ ಪತ್ರ ಪ್ರದರ್ಶಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಆಕ್ರೋಶ!

ಭಾರತ-ಪಾಕಿಸ್ತಾನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮತ್ತು ವಿಪ್ರಜ್ ಡಿಕ್ಕಿ: ನೋವಿನಿಂದ ನರಳಾಡಿದ್ದ ಸ್ಫೋಟಕ ಬ್ಯಾಟರ್, Video!

'ಶತಕ ಪೂರೈಸಲು ಸಿಕ್ಸರ್ ಬಾರಿಸುತ್ತೇನೆ,' 'ಮೈದಾನದಲ್ಲಿದ್ದರೆ ಸಾಕು, ಖುಷಿಯಾಗಿರುತ್ತೇನೆ'; ಮೆಕಲಮ್ ದಾಖಲೆ ಮುರಿದ Rishabh Pant ಹೇಳಿದ್ದೇನು?

96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!

ನಿಶ್ಚಿತಾರ್ಥ ಮಾಡಿಕೊಂಡ Biggboss ಜೋಡಿ: ಉಂಗುರ ಬದಲಿಸಿಕೊಂಡ ಶಿಶಿರ್-ಐಶ್ವರ್ಯಾ!