ಐಎಎಫ್ ಯುದ್ಧ ವಿಮಾನ ಮತ್ತು ಬಾಂಬುಗಳು ಬಿದ್ದ ಸ್ಥಳ ಪರಿಶೀಲನೆ ಮಾಡುತ್ತಿರುವ ಪೊಲೀಸರು 
ದೇಶ

ಆಕಸ್ಮಿಕವಾಗಿ ಯುದ್ಧ ವಿಮಾನದಿಂದ ಜಾರಿ ರಾಜಸ್ತಾನದಲ್ಲಿ ಬಿದ್ದ ಬಾಂಬುಗಳು..!

ಭಾರತೀಯ ವಾಯುಸೇನೆಗೆ ಫೈಟರ್ ಜೆಟ್ ಯುದ್ಧ ವಿಮಾನವೊಂದು ಮಂಗಳವಾರ ಆಕಸ್ಮಿಕವಾಗಿ ತನ್ನ ಬಾಂಬುಗಳನ್ನು ಜಾರಿಸಿದ ಘಟನೆ ಮಂಗಳವಾರ ರಾಜಸ್ತಾನದಲ್ಲಿ ನಡೆದಿದೆ...

ಬಾರ್ಮರ್: ಭಾರತೀಯ ವಾಯುಸೇನೆಗೆ ಫೈಟರ್ ಜೆಟ್ ಯುದ್ಧ ವಿಮಾನವೊಂದು ಮಂಗಳವಾರ ಆಕಸ್ಮಿಕವಾಗಿ ತನ್ನ ಬಾಂಬುಗಳನ್ನು ಜಾರಿಸಿದ ಘಟನೆ ಮಂಗಳವಾರ ರಾಜಸ್ತಾನದಲ್ಲಿ  ನಡೆದಿದೆ.

ರಾಜಸ್ತಾನದ ಬಾರ್ಮರ್ ಜಿಲ್ಲೆಯ ಗುಗ್ಡಿ ಪಟ್ಟಣ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿದ್ದ ಭಾರತೀಯ ಸೇನೆಯ ಯುದ್ಧ ವಿಮಾನದಲ್ಲಿ ಅಳವಡಿಸಲಾಗಿದ್ದ ಬಾಂಬುಗಳು ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ.  ಒಟ್ಟು ಐದು ಬಾಂಬುಗಳು ಕೆಳಗೆ ಬಿದ್ದಿದ್ದು, ಬಾಂಬುಗಳು ಬೀಳುತ್ತಿದ್ದಂತೆಯೇ ಭಾರಿ ಸದ್ದು ಉಂಟಾಗಿದ್ದು, ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಈ ಭಾರಿ ಸದ್ದು ಕೇಳಿದೆ. ಬಾಂಬುಗಳು ನಿರ್ಜನ  ಪ್ರದೇಶದಲ್ಲಿ ಬಿದ್ದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಐಎಎಫ್ ಸೇನಾ ಮೂಲಗಳು ತಿಳಿಸಿವೆ.

ಇನ್ನು ಘಟನಾ ಸ್ಥಳಕ್ಕೆ ಈಗಾಗಲೇ ಐಎಎಫ್​ನ ತಜ್ಞರ ತಂಡ, ಸ್ಥಳೀಯ ಪೊಲೀಸ್ ತಂಡ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಮಾಹಿತಿ ನೀಡಿರುವ ಐಎಎಫ್  ಅಧಿಕಾರಿಗಳು ಆಕಸ್ಮಿಕವಾಗಿ ಘಟನೆ ನಡೆದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT