ನವದೆಹಲಿ: ವಾಟರ್ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿ ತನಿಖೆಗೆ ಒಳಗಾಗುವಂತೆ ಭ್ರಷ್ಟಾಚಾರ ನಿಗ್ರಹ ದಳ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಬುಧವಾರ ನೋಟಿಸ್ ಜಾರಿ ಮಾಡಿದೆ.
ದೆಹಲಿ ಜಲ ಮಂಡಳಿಯ ವಾಟರ್ ಟ್ಯಾಂಕರ್ ಹಗರಣ ಕುರಿತಂತೆ ನಿಮಗೆ ಸತ್ಯ ತಿಳಿದಿರುವುದಾಗಿ ತೋರುತ್ತಿದ್ದು, ತನಿಖೆಗೆ ಸಹಕರಿಸುವಂತೆ ನೋಟಿಸ್ ನಲ್ಲಿ ಹೇಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನೋಟಿಸ್ ಕುರಿತಂತೆ ಮಾತನಾಡಿರುವ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥೆ ಎಂ.ಕೆ, ಮೀನಾ ಅವರು, ವಾಟರ್ ಟ್ಯಾಂಕರ್ ಹಗರಣವನ್ನು ನಾವು ತನಿಖೆ ನಡೆಸುತ್ತಿದ್ದೇನೆ. ಪ್ರಕರಣ ಸಂಬಂಧ ತನಿಖೆಗೆ ಸಹಕರಿಸುವಂತೆ ಶೀಲಾ ದೀಕ್ಷಿತೆ ಜೀ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.