ದೇಶ

ಕಾಶ್ಮೀರದ ಅನಂತ್ ನಾಗ್ ನಲ್ಲಿ ಮತ್ತೊಂದು ಗಲಭೆ: ಮತ್ತೆ ಅಮರನಾಥ್ ಯಾತ್ರೆ ಸ್ಥಗಿತ

Srinivas Rao BV

ಜಮ್ಮು: ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ಮುಜಾಫರ್ ವಾನಿ ಹತ್ಯೆಯಿಂದಾಗಿ ಉಂಟಾದ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದ್ದು, ಅಮರನಾಥ್ ಯಾತ್ರೆ ಮತ್ತೊಮ್ಮೆ ಸ್ಥಗಿತಗೊಂಡಿದೆ.

ಮುಂದುವರೆದಿರುವ ಪ್ರಕ್ಷುಬ್ಧ ವಾತಾವರಣದೊಂದಿಗೆ ಅನಂತ್ ನಾಗ್ ಜಿಲ್ಲೆಯಲ್ಲಿ ಹೊಸದೊಂದು ಗಲಭೆ ನಡೆದಿರುವ ಬಗ್ಗೆ ವರದಿಯಾಗಿದ್ದು, ಎರಡನೇ ಬಾರಿ ಅಮರನಾಥ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.  

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಉಗ್ರ ಬುರ್ಹಾನ್ ಮುಜಾಫರ್ ವಾನಿಯ ಹತ್ಯೆಯಾದ ನಂತರ ಉಂಟಾದ ಗಲಭೆಗಳಿಂದಾಗಿ. ಮೂರು ದಿನಗಳ ಕಾಲ ಅಮರನಾಥ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಆ ನಂತರ ಸೋಮವಾರದಂದು ಯಾತ್ರೆಯನ್ನು ಪುನಾರಂಭ ಮಾಡಿರುವುದನ್ನು ಸ್ಥಳೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಇತ್ತೀಚಿನ ವರದಿಯ ಪ್ರಕಾರ ಅಮರನಾಥ್ ಯಾತ್ರೆ ನಡೆಯುವ ಅನಂತ್ ನಾಗ್ ಜಿಲ್ಲೆಯಲ್ಲಿ ಹೊಸ ಗಲಭೆ ನಡೆದಿರುವುದರ ಬಗ್ಗೆ ಮಾಹಿತಿ ದೊರೆತಿದ್ದು ತಾತ್ಕಾಲಿಕವಾಗಿ ಅಮರಾನಾಥ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಪ್ರತಿಭಟನಾ ನಿರತರು ಹಾಗೂ ಪೊಲೀಸರ ನಡುವಿನ ಘರ್ಷಣೆಯಿಂದಾಗಿ ಕಾಶ್ಮೀರದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 30 ನ್ನು ದಾಟಿದ್ದು, ಕರ್ಫ್ಯೂ ಮುಂದುವರೆದಿದ್ದು, ಇನ್ನು ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಲು ಕಾಶ್ಮೀರ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದಾರೆ.

SCROLL FOR NEXT