ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಡಾರ್ಜಿಲಿಂಗ್: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಬೆಂಗಾವಲು ಪಡೆಯ ವಾಹನ ಶುಕ್ರವಾರ ಡಾರ್ಜಿಲಿಂಗ್ ಸಮೀಪ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಣಬ್ ಮುಖರ್ಜಿವರು ಬಾಗ್ಡೋಗ್ರಾದಿಂದ ಡಾರ್ಜಿಲಿಂಗ್ ಕಡೆಗೆ ಪ್ರಯಾಣ ಬೆಳೆಸುತ್ತಿದ್ದಾಗ ಅವರ ಹಿಂದಿನಿಂದ ಚಲಿಸುತ್ತಿದ್ದ ಬೆಂಗಾವಲು ಪಡೆಯ ವಾಹನ ಕಮರಿಗೆ ಉರುಳಿದೆ. ಘಟನೆ ಸಂಭವಿಸಿದ ಕೆಲ ಕ್ಷಣಗಳಲ್ಲಿಯೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೇರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಡಾರ್ಜಿಲಿಂಗ್ಗೆ ಆಗಮಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ವತಃ ತಾವೇ ನಿಂತು ಕಾರ್ಯಾಚರಣೆ ಉಸ್ತುವಾರಿ ವಹಿಸಿದರು ಎನ್ನಲಾಗಿದೆ.