ಮೊದಲ ಚಿತ್ರದಲ್ಲಿ ಆರೋಪಿ ಸಾಯಿ ಸಂದೀಪ್ ಗೌದ್ ಕುರ್ರೆಮುಲ, ನಂತರದ ಚಿತ್ರದಲ್ಲಿ ಕೊಲೆಗೀಡಾದ ಗುಂದಮ್ ಸಂಕ್ರೀತ್
ಹೈದರಾಬಾದ್: ತನ್ನ ರೂಮ್ ಮೇಟ್ ನಿಂದಲೇ 24 ವರ್ಷದ ಹೈದರಾಬಾದಿನ ಕಾಚೆಗೂಡಿನ ಯುವಕ ಹತ್ಯೆಗೊಳಗಾಗಿದ್ದಾನೆ, ಅಮೆರಿಕಾದ ಟೆಕ್ಸಾಸ್ ನ ಆಸ್ಟಿನ್ ನಲ್ಲಿ ಮತ್ತೊಬ್ಬ ಹೈದರಾಬಾದ್ ಯುವಕನಿಂದಲೇ ನಿನ್ನೆ ರಾತ್ರಿ ಹತ್ಯೆಗೀಡಾಗಿದ್ದಾನೆ.
ಅಮೆರಿಕಾದ ನ್ಯೂ ಹೆವನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿಗೆ ಎರಡು ವರ್ಷ ಹಿಂದೆ ಸೇರಿಕೊಂಡಿದ್ದ ಹೈದರಾಬಾದಿನ ಗುಂದಮ್ ಸಂಕ್ರೀತ್. ಆರೋಪಿ ಸಾಯಿ ಸಂದೀಪ್ ಗೌದ್ ಕುರ್ರೆಮುಲ ಈ ಹಿಂದೆ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪೊಲೀಸರು ಆರೋಪಿ ವಿರುದ್ಧ ಕೊಲೆ ಕೇಸು ದಾಖಲಿಸಿ ಬಂಧಿಸಿದ್ದಾರೆ.
ಸಂದೀಪ್ ಸಂಕ್ರೀತ್ ರೂಮಿಗೆ ಕಳೆದ 15 ದಿನಗಳ ಹಿಂದೆ ಕನ್ಸಲ್ಟೆನ್ಸಿ ನೆರವಿನಿಂದ ಹೋಗಿ ಸೇರಿಕೊಂಡಿದ್ದ. ಇಬ್ಬರ ನಡುವೆ ಜಗಳವಾಗಿದ್ದೇ ಕೊಲೆಗೆ ಕಾರಣ ಎಂದು ಮತ್ತೊಬ್ಬ ರೂಮ್ ಮೇಟ್ ಪ್ರಣೀತ್ ಹೇಳಿದ್ದಾನೆ. ಆದರೆ ಜಗಳವಾಗಲು ಕಾರಣವೇನೆಂದು ಆತ ತಿಳಿಸಿಲ್ಲ.
ಸಂಕ್ರೀತ್ ಹೊಟ್ಟೆಗೆ ಇರಿದಿದ್ದರಿಂದ ರಕ್ತ ಸ್ರಾವವಾಗುತ್ತಿತ್ತು. ಕೂಡಲೇ ಅವನನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics