ರಾಹುಲ್ ಗಾಂಧಿ(ಸಂಗ್ರಹ ಚಿತ್ರ) 
ದೇಶ

ರಾಹುಲ್ ಗಾಂಧಿ ಕ್ಷಮೆ ಕೋರಬೇಕು: ಆರ್ ಎಸ್ಎಸ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ಷಮಾಪಣೆ ನೀಡಬೇಕು ಇಲ್ಲದಿದ್ದರೆ ಅವರು ಆಗಾಗ ಸುಪ್ರೀಂ ಕೋರ್ಟ್ ಗೆ ಹೋಗುತ್ತಿರಬೇಕಾಗುತ್ತದೆ ...

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ಷಮಾಪಣೆ ನೀಡಬೇಕು ಇಲ್ಲದಿದ್ದರೆ ಅವರು ಆಗಾಗ ಸುಪ್ರೀಂ ಕೋರ್ಟ್ ಗೆ ಹೋಗುತ್ತಿರಬೇಕಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳಿದೆ.
'' ರಾಹುಲ್ ಗಾಂಧಿಯವರಿಗೆ ನ್ಯಾಯಾಲಯದ ಮೇಲೆ ಸ್ವಲ್ಪವಾದರೂ ಗೌರವವಿದ್ದರೆ ಅವರು ಕ್ಷಮೆ ಕೇಳುತ್ತಾರೆ. ಅವರು ಕ್ಷಮೆ ಕೇಳದಿದ್ದರೆ ಕೋರ್ಟ್ ಗೆ ಆಗಾಗ ಹೋಗುತ್ತಿರಬೇಕಾಗುತ್ತದೆ ಎಂದು  ಆರ್ಎಸ್ಎಸ್ ಆದರ್ಶವಾದಿ ರಾಕೇಶ್ ಸಿನ್ಹಾ ಹೇಳಿದ್ದಾರೆ.
''ಮಾನನಷ್ಟ ಮೊಕದ್ದಮೆ ಸಾಮಾನ್ಯವಲ್ಲ. ನೆಹರೂ ಮನೆತನದವರು ಮೂರು ತಲೆಮಾರಿನವರೆಗೆ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ. ಅದು ಜವಹರಲಾಲ್ ನೆಹರೂ ಅವರಿಂದ ಹಿಡಿದು ರಾಹುಲ್ ಗಾಂಧಿಯವರೆಗೆ ಮುಂದುವರಿದಿದೆ. ರಾಹುಲ್ ಗಾಂಧಿಯವರು ಕೀಳುಮಟ್ಟದ ರಾಜಕೀಯಕ್ಕೆ ಇಳಿಯಬಾರದು ಮತ್ತು ತಮ್ಮ ಹೇಳಿಕೆಗೆ ಸಂಬಂಧಿಸಿ ಕ್ಷಮಾಪಣೆ ಕೋರಬೇಕು ಎಂದು ಹೇಳಿದರು.
ಮಹಾತ್ಮಾ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಕೇಸು ಕೋರ್ಟಿನಲ್ಲಿ ವಿಚಾರಣೆಗೆ ಬಂದಾಗ ಸಾಕ್ಷಿದಾರರೊಂದಿಗೆ ಆರ್ ಎಸ್ಎಸ್ ಸಂಪರ್ಕವನ್ನೇ ಹೊಂದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. 1965ರಲ್ಲಿ ಇಂದಿರಾ ಗಾಂಧಿಯವರು ಕಾಪೂರ್ ಆಯೋಗವನ್ನು ರಚಿಸಿದರು. ಅದು ವಿಚಾರಣೆ ನಡೆಸಿ ವರದಿಯನ್ನು 1979ರಲ್ಲಿ ಮಂಡಿಸಿತು. ಆ ವರದಿಯಲ್ಲಿ, ಮಹಾತ್ಮಾ ಗಾಂಧಿಯವರ ಹತ್ಯೆಯಲ್ಲಿ ಆರ್ ಎಸ್ ಎಸ್ ಪಾತ್ರವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು ಎಂದು ಸಿನ್ಹಾ ವಿವರಿಸಿದರು.
ಮಹಾರಾಷ್ಟ್ರದ ಜಲ್ಗೌನ್ ಜಿಲ್ಲೆಯ ಸೊನಲೆ ಎಂಬಲ್ಲಿ ಕಳೆದ ಮಾರ್ಚ್ 6ರಂದು ರಾಹುಲ್ ಗಾಂಧಿ ಚುನಾವಣಾ ಭಾಷಣದ ವೇಳೆ ಗಾಂಧೀಜಿಯನ್ನು ಕೊಂದಿದ್ದು ಆರ್ ಎಸ್ಎಸ್ ನವರು ಎಂದು ಹೇಳಿದ್ದರು. ಇವರ ಹೇಳಿಕೆಯನ್ನು ಖಂಡಿಸಿ ಆರ್ಎಸ್ಎಸ್ ಬಿವಂಡಿ ಘಟಕದ ಕಾರ್ಯದರ್ಶಿ ಕುಂಟೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!