ಭೋಪಾಲ್: ಇದನ್ನು ನಂಬುವುದು ಕಷ್ಟ. ಆದರೂ ಇದು ನಿಜ. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರನ್ನು ಕೇಂದ್ರ ಹಾಗೂ ಮಧ್ಯಪ್ರದೇಶ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರ(ಬಿಪಿಎಲ್) ಪಟ್ಟಿಗೆ ಸೇರಿಸಿದೆ!
ಈ ಬಗ್ಗೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು, ನಾನಾಗಲೀ ನನ್ನ ಕುಟುಂಬ ಸದಸ್ಯರಾಗಲೀ ಯಾರೂ ಕೂಡ ಬಿಪಿಎಲ್ ಯೋಜನೆಗೆ ನಮ್ಮನ್ನು ಸೇರಿಸಿಕೊಳ್ಳುವಂತೆ ಎಂದೂ ಅರ್ಜಿ ಹಾಕಿಲ್ಲ. ಮೇಲಾಗಿ ನಾವು ತೆರಿಗೆ ಪಾವತಿದಾರರಾಗಿದ್ದೇವೆ ಎಂದು ಹೇಳಿದ್ದಾರೆ.
ಈ ಸಂಬಂಧ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ದಿಗ್ವಿಜಯ್ ಸಿಂಗ್, ಇದು ನನ್ನ ವಿರುದ್ಧ ನಡೆಸಿರುವ ಪಿತೂರಿ. ಕೇಂದ್ರ ಮತ್ತು ಮಧ್ಯಪ್ರದೇಶ ಸರ್ಕಾರ ದುರುದ್ದೇಶದಿಂದ ನನ್ನ ಹೆಸರನ್ನು, ನನ್ನ ಸಹೋದರ ಹಾಗೂ ಪುತ್ರನ ಹೆಸರನ್ನು ಬಿಪಿಎಲ್ ಪಟ್ಟಿಗೆ ಸೇರಿಸಿದೆ. ಈ ತಪ್ಪಿಗೆ ಸಂಬಂಧಪಟ್ಟವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ಮಾನಸಿಕವಾಗಿ ಬಡವರಾಗಿದ್ದು, ಬಿಪಿಎಲ್ ಪಟ್ಟಿಯಲ್ಲಿ ಅವರ ಹೆಸರು ಹೇಗೆ ಬಂತು ಎಂಬುದರ ಬಗ್ಗೆ ಅವರೇ ಉತ್ತರಿಸಬೇಕು ಎಂದು ಬಿಜೆಪಿ ತಿರುಗೇಟು ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics