ಟೈಗರ್ ನಾಯಿಗೆ ಪೊಲೀಸರಿಂದ ಅಂತಿಮ ಗೌರವ (ಟ್ವಿಟರ್ ಚಿತ್ರ) 
ದೇಶ

26/11 ಮುಂಬೈ ದಾಳಿ ಹೀರೋ "ಟೈಗರ್" ನಿಧನ

26/11 ಮುಂಬೈ ಭಯೋತ್ಪಾದಕ ದಾಳಿ ವೇಳೆ ತನ್ನ ಪ್ರಾಣದ ಹಂಗು ತೊರೆದು ಉಗ್ರರು ಅಡಗಿಸಿದ್ದ ಬಾಂಬ್ ಅನ್ನು ಹುಡಿಕಿದ್ದ ಪೊಲೀಸ್ ನಾಯಿ "ಟೈಗರ್" ಶನಿವಾರ ತಡರಾತ್ರಿ ಮುಂಬೈನಲ್ಲಿ ಕೊನೆಯುಸಿರೆಳೆದಿದೆ.

ಮುಂಬೈ: 26/11 ಮುಂಬೈ ಭಯೋತ್ಪಾದಕ ದಾಳಿ ವೇಳೆ ತನ್ನ ಪ್ರಾಣದ ಹಂಗು ತೊರೆದು ಉಗ್ರರು ಅಡಗಿಸಿದ್ದ ಬಾಂಬ್ ಅನ್ನು ಹುಡಿಕಿದ್ದ ಪೊಲೀಸ್ ನಾಯಿ "ಟೈಗರ್" ಶನಿವಾರ ತಡರಾತ್ರಿ  ಮುಂಬೈನಲ್ಲಿ ಕೊನೆಯುಸಿರೆಳೆದಿದೆ.

ಮೂಲಗಳ ಪ್ರಕಾರ ಟೈಗರ್ ನಾಯಿ ವಯೋ ಸಹಜ ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣ ಬಳಿಕ ಕೊಲಾಬಾದಲ್ಲಿರುವ ತಾಜ್  ಹೊಟೆಲ್ ನಲ್ಲಿ ಒಂದಷ್ಚು ದಿನಗಳ ಕಾಲ ಭದ್ರತಾ ಸೇವೆಗೆ ನಿಯೋಜನೆಯಾಗಿದ್ದ "ಟೈಗರ್" ನಾಯಿ ಬಳಿಕ ನಿವೃತ್ತಿಯಾಗಿತ್ತು. ಟೈಗರ್ ನಿವೃತ್ತಿ ಬಳಿಕ ಮುಂಬೈನ ಪ್ರಾಣಿ ಸಂಘಟನಾ ಸದಸ್ಯ  ಫಿಝಾ ಶಾ ಎಂಬುವವರು ಟೈಗರ್ ನಾಯಿ ಸೇರಿದಂತೆ ಇತರೆ ಮ್ಯಾಕ್ಸ್, ಸುಲ್ತಾನ್, ಸೀಸರ್ ಎಂಬ ನಾಲ್ಕು ನಿವೃತ್ತ ನಾಯಿಗಳನ್ನು ಸಾಕುವ ಜವಾಬ್ದಾರಿ ತೆಗೆದುಕೊಂಡಿದ್ದರು.

ಆದರೆ ನಿನ್ನೆ ಫಿಝಾ ಶಾ ಅವರ ವಿರಾರ್ ನಲ್ಲಿರುವ ನಿವಾಸದಲ್ಲಿ ಟೈಗರ್ ನಾಯಿ ಸಾವನ್ನಪ್ಪಿದೆ. ಕಳೆದ ಹಲವು ದಿನಗಳಿಂದ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ "ಟೈಗರ್" ಆರೋಗ್ಯ  ಸ್ಥಿತಿ ಶುಕ್ರವಾರ ತೀರಾ ಗಂಭೀರವಾಗಿತ್ತು. ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಶನಿವಾರ ರಾತ್ರಿ ನಾಯಿ ತನ್ನ ಕೊನೆಯುಸೆರೆಳಿದಿದೆ.

ಮುಂಬೈ ದಾಳಿ ಪ್ರಕರಣದ ಬಳಿಕ ಪೊಲೀಸ್ ಇಲಾಖೆಯಲ್ಲಿ ಖ್ಯಾತಿ ಪಡೆದಿದ್ದ ಟೈಗರ್ ಗೆ ಇದೀಗ ಖ್ಯಾತನಾಮರು ಅಂತಿಮ ಗೌರವ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video