ದೇಶ

16 ದಿನಗಳ ಬಳಿಕ ಕಣಿವೆ ರಾಜ್ಯದಲ್ಲಿ ಮೊಬೈಲ್, ಇಂಟರ್ ನೆಟ್ ಸೇವೆ ಪುನಾರಂಭ

Srinivas Rao BV

ಜಮ್ಮು: 16 ದಿನಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಗಳು ಪುನಾರಂಭಗೊಂಡಿದೆ.

ಗಲಭೆ ಪೀಡಿತ ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ವಿಭಾಗೀಯ ಆಡಳಿತ ಪರಿಶೀಲಿಸಿದ್ದು, ಜಮ್ಮು-ಕಾಶ್ಮೀರದಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು ಪುನಾರಂಭಗೊಳಿಸಲು ಸೋಮವಾರ ಮಧ್ಯರಾತ್ರಿಯೇ ನಿರ್ಧರಿಸಿತ್ತು, ವಿಭಾಗೀಯ ಆಡಳಿತದ ನಿರ್ಧಾರದಂತೆ 25 ರ ಸೋಮವಾರ ಮಧ್ಯ ರಾತ್ರಿಯಿಂದಲೇ ಮೊಬೈಲ್ ಇಂಟರ್ ನೆಟ್ ಸೇವೆಗಳು ಪುನಾರಂಭಗೊಂಡಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಕಣಿವೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಜು.10 ರಂದು ಜಮ್ಮು ಪ್ರದೇಶದಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ 16 ದಿನಗಳ ವರೆಗೆ ಮೊಬೈಲ್ ಕರೆ ಹಾಗು ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಂಡಿತ್ತು.  ಬಿಎಸ್ಎನ್ ಎಲ್ ನ ಪೋಸ್ಟ್ ಪೇಯ್ಡ್ ಮೊಬೈಲ್ ಗಳಲ್ಲಿ ಸೀಮಿತ ಕರೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

SCROLL FOR NEXT